ಕರ್ನಾಟಕ

karnataka

ETV Bharat / state

ರಸ್ತೆ ಸರಿಯಿಲ್ಲದಿದ್ರೂ ದುಬಾರಿ ದಂಡ ಯಾಕೆ..? ಜನ ಹೀಗೆ ಕೇಳೋದರಲ್ಲಿ ಅರ್ಥ ಇದೆ ಎಂದ ಮೇಯರ್

ದುಬಾರಿ ದಂಡ ವಿಧಿಸಿದರೆ ಸಾಲದು ಅದಕ್ಕೆ ತಕ್ಕಂತೆ ರೋಡ್​ಗಳು ಸರಿಯಾಗಿ ಇರಬೇಕು ಅಲ್ವಾ ಅಂತ ಜನ ಪ್ರಶ್ನಿಸೋದು ಸರಿಯಾಗೇ ಇದೆ ಎಂದು ಮೇಯರ್​ ಗಂಗಾಂಬಿಕೆ ಅಭಿಪ್ರಾಯಿಸಿದ್ದಾರೆ.

ರಸ್ತೆ ಸರಿಯಿಲ್ಲದಿದ್ರೂ ದುಬಾರಿ ದಂಡ ಯಾಕೆ..?

By

Published : Sep 9, 2019, 11:27 PM IST

Updated : Sep 9, 2019, 11:43 PM IST

ಬೆಂಗಳೂರು: ಇತ್ತೀಚೆಗೆ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿ, ಪ್ರತಿಯೊಂದಕ್ಕೂ ದುಬಾರಿ ದಂಡ ವಿಧಿಸುವ ಹೊಸ ರೂಲ್ಸ್ ಜಾರಿ ಮಾಡಿದೆ. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾ ಸೇರಿದಂತೆ ನಾನಾ ಕಡೆ ದುಬಾರಿ ದಂಡದ ಕುರಿತು ಆಕ್ರೋಶ ವ್ಯಕ್ತವಾಗಿದೆ.

ಹೊಸ ಕಾನೂನು ತರೋ ಮುಂಚೆ ನೀವೂ ಸರಿಯಾಗಿ ನಮಗೆ ಬೇಕಾದ ಸೌಕಾರ್ಯ ಕಲ್ಪಿಸಿ ಅಂತ ಅನ್ನೋ ಸಂದೇಶಗಳು ಹರಿದಾಡುತ್ತಿದೆ.. ದುಬಾರಿ ದಂಡ ವಿಧಿಸಿದರೆ ಸಾಲದು ಅದಕ್ಕೆ ತಕ್ಕಂತೆ ರೋಡ್ ಗಳು ಸರಿಯಾಗಿ ಇರಬೇಕು ಅಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ..ಈ ಸಂಬಂಧ ಪಟ್ಟಂತೆ ನಗರ ಪಾಲಿಕೆಯ ಮೇಯರ್ ಗಂಗಾಂಬಿಕೆಯವರನ್ನ ಕೇಳಿದ್ರೆ ಜನರು ಹೀಗೆಲ್ಲ ಕೇಳೋದರಲ್ಲಿ ಅರ್ಥ ಇದೆ. ಎಲ್ಲ ರೀತಿಯಲ್ಲೂ ತೆರಿಗೆ ಕಟ್ಟಿಸಿ ಕೊಳ್ಳುತ್ತೀರಾ.. ನಿಮ್ಮಲ್ಲಿ ಲೋಪದೋಷ ಇಟ್ಟುಕೊಂಡು ನಮ್ಮ ಮೇಲೆ ತಪ್ಪು ಹುಡುಕೋದು ಎಷ್ಟು ಸರಿ ಅಂತ ಅವರು ಪ್ರಶ್ನೆ ಮಾಡೋದರಲ್ಲಿ ಒಂದು ಅರ್ಥ ಇದೆ.‌ ಆದರೆ ಇಲ್ಲಿ ಜನರು ಸಹಕಾರ ನೀಡಬೇಕು.. ಗುಂಡಿ ಇದ್ದಾಗ ಅಲ್ಲಿನ ಸ್ಥಳೀಯರು ಮಾಹಿತಿ ನೀಡಬೇಕು ಅಂತ ತಿಳಿಸಿದರು..

ರಸ್ತೆ ಸರಿಯಿಲ್ಲದಿದ್ರೂ ದುಬಾರಿ ದಂಡ ಯಾಕೆ..?

ಈಗಾಗಲೇ ಸಂಬಂಧ ಪಟ್ಟ ಗುತ್ತಿಗೆದಾರರಿಗೆ, ಇಂಜಿನಿಯರ್ ಗಳಿಗೆ ರಸ್ತೆ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗಿದೆ.ರಸ್ತೆಯಲ್ಲಿ ಗುಂಡಿಗಳು ಇದ್ದರೆ ಅಥವಾ ಸರಿಯಾದ ರೀತಿಯಲ್ಲಿ ಗುಂಡಿ ಮುಚ್ಚದೇ ಇದ್ದರೆ ಕ್ರಮ ಕೈಗೊಳ್ಳಲಾಗುತ್ತೆ ಅಂತಾರೆ..

ರಸ್ತೆಯಲ್ಲಿ ಗುಂಡಿ ಕಂಡರೆ ಕಾಲ್ ಮಾಡಿ ದೂರು ನೀಡಿ..

ಇನ್ನು ನಿಮ್ಮ- ನಿಮ್ಮ ಏರಿಯಾದಲ್ಲಿ ಗುಂಡಿ ಕಂಡರೆ ಕೂಡಲೇ ಪಾಲಿಕೆಗೆ ಕರೆ ಮಾಡಿ ಅಂದಿದ್ದಾರೆ ಮೇಯರ್ ಗಂಗಾಂಬಿಕೆ. ಕರೆ ಮೂಲಕವೂ ಕೆಲಸ ಆಗಲಿಲ್ಲ ಅಂದರೆ ಬರವಣಿಗೆಯಲ್ಲಿ ಪತ್ರವೊಂದು ಬರೆದು ದೂರು ನೀಡಿ. ಆಗ ಸಂಬಂಧಪಟ್ಟವ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಅಂತ ಸಾರ್ವಜನಿಕರಿಗೆ ಮನವಿ ಮಾಡಿದರು,ರಸ್ತೆ ಸರಿ ಮಾಡಿ ಆಮೇಲೆ ದುಬಾರಿ ದಂಡ ವಿಧಿಸಿ ಅಂತ ಹೇಳಿದವರಿಗೆ, ಪಾಲಿಕೆ ಅಸ್ತು ಎಂದಿದೆ. ರಸ್ತೆ ಗುಂಡಿ ಮುಚ್ಚದೇ ಇದ್ದರೆ ಅಂತಹ ಕಂಟ್ರಾಕ್ಟರ್, ಎಂಜಿನಿಯರ್ಸ್ ಗಳಿಗೆ ಬಿಸಿ ಮುಟ್ಟಿಸಲು ಮೇಯರ್ ಗಂಗಾಂಬಿಕೆ ದಿಢೀರ್ ಪರಿಶೀಲನೆಗೂ ಮುಂದಾಗಲಿದ್ದಾರೆ.

Last Updated : Sep 9, 2019, 11:43 PM IST

ABOUT THE AUTHOR

...view details