ಬೆಂಗಳೂರು:ನಗರದಲ್ಲಿ ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಖುದ್ದು ರಸ್ತೆಗಿಳಿದು ಕೆಲಸ ಮಾಡುತ್ತಿರುವ ನಗರ ಸಂಚಾರ ಪೊಲೀಸರ ಕಾರ್ಯವೈಖರಿ ಬಗ್ಗೆ ಮೇಯರ್ ಗಂಗಾಂಬಿಕೆ ಪ್ರತಿಕ್ರಿಯೆ ನೀಡಿದ್ದಾರೆ.
ಪೊಲೀಸರು ರಸ್ತೆ ಗುಂಡಿ ಮುಚ್ಚೋದು ಬೇಡ, ಅದನ್ನು ನಾವೇ ಮಾಡುತ್ತೇವೆ: ಮೇಯರ್ ಗಂಗಾಂಬಿಕೆ
ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದ ಪೊಲೀಸ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಮೇಯರ್ ಗಂಗಾಂಬಿಕೆ ಕೂಡಲೇ ಈ ಕೆಲಸ ಕೈಬಿಡಿ. ಅದು ನಮ್ಮ ಕೆಲಸ ನಾವೇ ಮಾಡುತ್ತೇವೆ ಎಂದು ಹೇಳಿದರು.
ಮೇಯರ್ ಗಂಗಾಬಿಕೆ
ಪೊಲೀಸರಿಗೆ ಹಲವಾರು ಒತ್ತಡ, ಇತರೆ ಕೆಲಸಗಳೇ ಹೆಚ್ಚಿರುತ್ತವೆ. ಈ ಮಧ್ಯೆ ಅವರು ರಸ್ತೆಗುಂಡಿಗಳನ್ನು ಮುಚ್ಚುವುದು ಬೇಡ. ಅದು ನಮ್ಮ ಕೆಲಸವಾಗಿದ್ದು, ನಾವೇ ಮಾಡುತ್ತೇವೆ. ಹೀಗಾಗಿ ಪೊಲೀಸರು ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಕೂಡಲೇ ಕೈ ಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.