ಕರ್ನಾಟಕ

karnataka

ETV Bharat / state

ಬಿಬಿಎಂಪಿ ಮೇಯರ್​​ ಚುನಾವಣೆ ನಂಬರ್​​ ಗೇಮ್​​​ ಆರಂಭ: ಸ್ಪರ್ಧೆಯಿಂದ ಹಿಂದೆ ಸರಿದ ಕೈ ಅಭ್ಯರ್ಥಿ - number game start

ಬಿಬಿಎಂಪಿ ಮೇಯರ್ ಚುನಾವಣೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದೆ. ಅದರ ಜೊತೆಗೆ ಪಾಲಿಕೆ ಆವರಣದಲ್ಲಿ ನಂಬರ್ ಗೇಮ್ ಆರಂಭವಾಗಿದ್ದು, ಲೆಕ್ಕಾಚಾರ ನಡೀತಿದೆ. ಇನ್ನು ಕಾಂಗ್ರೆಸ್ ಮೇಯರ್ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದ ಎಂ.ಶಿವರಾಜು ಈ ಬಾರಿ ಹಿಂದೆ ಸರಿದಿದ್ದಾರೆ.

ಮೇಯರ್ ಚುನಾವಣೆ ನಂಬರ್ ಗೇಮ್ ಆರಂಭ: ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಕಾಂಗ್ರೆಸ್ ಅಭ್ಯರ್ಥಿ

By

Published : Aug 29, 2019, 8:42 PM IST

ಬೆಂಗಳೂರು:ಬಿಬಿಎಂಪಿ ಮೇಯರ್ ಚುನಾವಣೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿ ಸಿದ್ಧವಾಗಿದೆ. ಅದರ ಜೊತೆಗೆ ಪಾಲಿಕೆ ಆವರಣದಲ್ಲಿ ನಂಬರ್ ಗೇಮ್ ಆರಂಭವಾಗಿದ್ದು, ಲೆಕ್ಕಾಚಾರ ನಡೀತಿದೆ.

ಮೇಯರ್ ಚುನಾವಣೆ ನಂಬರ್ ಗೇಮ್ ಆರಂಭ: ಸ್ಪರ್ಧೆಯಿಂದ ಹಿಂದಕ್ಕೆ ಸರಿದ ಕಾಂಗ್ರೆಸ್ ಅಭ್ಯರ್ಥಿ

ಒಟ್ಟು ಮತದಾರರ ಸಂಖ್ಯೆ 257 ಇದ್ದು, ಅನರ್ಹ ಶಾಸಕರ ಹೆಸರು ಕೈಬಿಟ್ಟಿರುವುದರಿಂದ ಕಾಂಗ್ರೆಸ್ ಸಂಖ್ಯಾಬಲ ಕುಸಿದಿದೆ. ಅನರ್ಹ ಶಾಸಕರಲ್ಲಿ ಸುಮಾರು 20 ಜನ ಬೆಂಬಲಿಗರೂ ಕೂಡಾ ಚುನಾವಣೆ ದಿನ ಗೈರಾಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್​​ಗೆ ಮೇಯರ್ ಪಟ್ಟ ಸಿಗೋದು ಡೌಟ್ ಎಂಬಂತಾಗಿದೆ. ಹೀಗಾಗಿಯೇ ಕಾಂಗ್ರೆಸ್ ಮೇಯರ್ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದ ಎಂ.ಶಿವರಾಜು ಕೂಡಾ ಹಿಂದೆ ಸರಿದಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್, ಜೆಡಿಎಸ್, ಪಕ್ಷೇತರರ ಒಟ್ಟು ಮತ ಸೇರಿ 131 ಆಗಲಿದೆ. ಬಿಜೆಪಿ ಬಲ ಒಬ್ಬರು ಪಕ್ಷೇತರರ ಮತ ಸೇರಿ 126 ಆಗಲಿದೆ. ಸದ್ಯಕ್ಕೆ ಕಾಂಗ್ರೆಸ್ ಬಲ ಹೆಚ್ಚೇ ಇದ್ದರೂ, ಪಕ್ಷೇತರರು ಈ ಬಾರಿ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಲಿದ್ದಾರೆ. ಅಲ್ಲದೆ, ಕಾಂಗ್ರೆಸ್ ಅನರ್ಹ ಶಾಸಕರ ಸುಮಾರು ಇಪ್ಪತ್ತು ಬೆಂಬಲಿಗರೂ ಚುನಾವಣೆ ಸಮಯದಲ್ಲಿ ಗೈರಾಗುವ ಸಾಧ್ಯತೆ ಇದ್ದು, ಇದು ಬಿಜೆಪಿ ಪಕ್ಷಕ್ಕೆ ವರದಾನವಾಗಲಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, 257 ಒಟ್ಟು ಮತದಾರರು ಅಂದ್ರೂ ಕೂಡಾ ಕಾಂಗ್ರೆಸ್-ಜೆಡಿಎಸ್ ವಾಮಮಾರ್ಗದಿಂದ ಬೋಗಸ್ ಮತದಾರರನ್ನು ಸೇರಿಸುತ್ತದೆ. ನಾಲ್ಕು ವರ್ಷ ಅದನ್ನೇ ಮಾಡಿಕೊಂಡು ಬಂದಿದೆ. ಆದ್ರೆ ಈ ಬಾರಿ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಆಡಳಿತ ಪಕ್ಷದ ನಾಯಕ, ವಾಜಿದ್ ಮಾತನಾಡಿ ಮೈತ್ರಿ ಪಕ್ಷಕ್ಕೆ 131 ಸದಸ್ಯರು, ಬಿಜೆಪಿ 126 ಸದಸ್ಯರಿದ್ದಾರೆ. ಈಗಲೂ ಕಾಂಗ್ರೆಸ್​ಗೇ ಹೆಚ್ಚಿನ ಸಂಖ್ಯಾಬಲ ಇರುವುದರಿಂದ ಮೈತ್ರಿಯಿಂದಲೇ ಮುಂದಿನ ಮೇಯರ್ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details