ಕರ್ನಾಟಕ

karnataka

By

Published : Sep 24, 2019, 5:28 PM IST

ETV Bharat / state

ಮೇಯರ್ ಚುನಾವಣೆ ಕಸರತ್ತು: ವಿಧಾನಸೌಧದಲ್ಲಿ ಎಸ್.ರಘು ನೇತೃತ್ವದ ಸಮಿತಿಯಿಂದ‌ ಆಕಾಂಕ್ಷಿಗಳ ಜತೆ ಸರಣಿ ಸಭೆ

ಬಿಜೆಪಿಯಲ್ಲಿನ ಮೇಯರ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಮೇಯರ್ ಹಾಗೂ ಉಪಮೇಯರ್ ಗಾಗಿ ಪೈಪೋಟಿ ತೀವ್ರಗೊಂಡಿದೆ. ಮೇಯರ್ ಆಕಾಂಕ್ಷಿ ಪದ್ಮನಾಭರೆಡ್ಡಿ ವಿರುದ್ಧ ಇತರೆ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಪದ್ಮನಾಭ ರೆಡ್ಡಿಗೆ ಯಾವುದೇ ಕಾರಣಕ್ಕೂ ಮೇಯರ್ ಹುದ್ದೆ ನೀಡಬಾರದೆಂದು ಕೆಲ ಆಕಾಂಕ್ಷಿಗಳು ಸಮಿತಿ ಮುಂದೆ‌ ಮನವಿ ಮಾಡಿದ್ದಾರೆ.

ಮೇಯರ್ ಚುನಾವಣೆ

ಬೆಂಗಳೂರು:ಬಿಜೆಪಿಯಲ್ಲಿ ಬಿಬಿಎಂಪಿ ಮೇಯರ್ ಚುನಾವಣೆ ಕಸರತ್ತು ತೀವ್ರಗೊಂಡಿದೆ. ಈ ಹಿನ್ನೆಲೆ ಮೇಯರ್, ಉಪಮೇಯರ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ರಚಿಸಲಾದ ಶಾಸಕ‌ ಎಸ್.ರಘು ನೇತೃತ್ವದ ಸಮಿತಿ ವಿಧಾನಸೌಧದಲ್ಲಿ ಸಭೆ ನಡೆಸುತ್ತಿದೆ.

ವಿಧಾನಸೌಧದಲ್ಲಿ ಎಸ್.ರಘು ನೇತೃತ್ವದ ಸಮಿತಿಯಿಂದ‌ ಆಕಾಂಕ್ಷಿಗಳ ಜತೆ ಸರಣಿ ಸಭೆ

ಬಿಜೆಪಿಯಲ್ಲಿನ ಮೇಯರ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಮೇಯರ್ ಹಾಗೂ ಉಪಮೇಯರ್ ಗಾಗಿ ಪೈಪೋಟಿ ತೀವ್ರಗೊಂಡಿದೆ. ಮೇಯರ್ ಆಕಾಂಕ್ಷಿ ಪದ್ಮನಾಭರೆಡ್ಡಿ ವಿರುದ್ಧ ಇತರೆ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಪದ್ಮನಾಭ ರೆಡ್ಡಿಗೆ ಯಾವುದೇ ಕಾರಣಕ್ಕೂ ಮೇಯರ್ ಹುದ್ದೆ ನೀಡಬಾರದೆಂದು ಕೆಲ ಆಕಾಂಕ್ಷಿಗಳು ಸಮಿತಿ ಮುಂದೆ‌ ಮನವಿ ಮಾಡಿದ್ದಾರೆ.

ಮೇಯರ್ ಸ್ಥಾನದ ಆಕಾಂಕ್ಷಿಗಳಾದ ಪದ್ಮನಾಭ ರೆಡ್ಡಿ, ಗೌತಮ್ ಕುಮಾರ್, ಉಮೇಶ ಶೆಟ್ಟಿ, ಮುನೇಂದ್ರ ಕುಮಾರ್, ಎಲ್.ಶ್ರೀನಿವಾಸ್, ಸಂಗಾತಿ ವೆಂಕಟೇಶ್, ಮಂಜುನಾಥ್ ರಾಜ್ ಅವರು ಸಭೆಗೆ ಆಗಮಿಸಿದ್ದಾರೆ. ಕೆಲ ಆಕಾಂಕ್ಷಿಗಳು ನಾಲ್ಕು ವರ್ಷ ವಿರೋಧ ಪಕ್ಷದ ನಾಯಕರಾಗಿ ಅಧಿಕಾರ ಅನುಭವಿಸಿರುವ ಪದ್ಮನಾಭ ರೆಡ್ಡಿಗೆ ಮೇಯರ್ ಸ್ಥಾನ ನೀಡಬಾರದೆಂದು ಮನವಿ ಮಾಡಿದ್ದಾರೆ. ಆಕಾಂಕ್ಷಿಗಳ ಜತೆ ಒನ್ ಟು ಒನ್ ಆಯ್ಕೆ ಸಮಿತಿ ಸಭೆ ನಡೆಸಿ, ಅಭಿಪ್ರಾಯ, ಸಲಹೆಗಳನ್ನು ಪಡೆಯುತ್ತಿದೆ.

ವಿಧಾನಸೌಧದಲ್ಲಿ ಮೇಯರ್, ಉಪ ಮೇಯರ್ ಆಯ್ಕೆ ಸಂಬಂಧ ಸಭೆ ಬಳಿಕ ಮಾತನಾಡಿದ ಅವರು, ಏಳು ಜನ ಆಕಾಂಕ್ಷಿ ಕಾರ್ಪೊರೇಟರ್ ಗಳ ಅಭಿಪ್ರಾಯ ಕೇಳಿದ್ದೇವೆ. ಎಲ್ಲ ಆಕಾಂಕ್ಷಿಗಳೂ ತಮ್ಮ ತಮ್ಮ ಬಯೋಡೇಟಾ ಕೊಟ್ಟಿದ್ದಾರೆ. ಬಯೋಡಾಟಾ ಪರಿಶೀಲನೆ ಮಾಡುತ್ತೇವೆ. ನಾಳೆ ಬಿಜೆಪಿ ಕಚೇರಿಯಲ್ಲಿ ಎಲ್ಲ 102 ಪಾಲಿಕೆ ಸದಸ್ಯರ ಸಭೆ ಕರೆದಿದ್ದೇವೆ. ಪಾಲಿಕೆ ಸದಸ್ಯರ ಅಭಿಪ್ರಾಯಗಳನ್ನೂ ಸಂಗ್ರಹ ಮಾಡುತ್ತೇವೆ ಎಂದು ತಿಳಿಸಿದರು.

ಅದೇ ರೀತಿ‌ ಬೆಂಗಳೂರಿನ‌ ಸಂಸದರು ಮತ್ತು ಶಾಸಕರು, ಸಚಿವರುಗಳ ಜತೆಗೂ ಸಭೆ ನಡೆಸಿ, ಅವರ ಅಭಿಪ್ರಾಯ ಸಂಗ್ರಹ ಮಾಡಲಿದ್ದೇವೆ. ಬಳಿಕ ವರದಿ ತಯಾರು ಮಾಡಿ ಸಿಎಂಗೆ ಸಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೇಯರ್ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಫಿಕ್ಸ್?:ಎಲ್ .ಶ್ರೀನಿವಾಸ್ ಗೆ ಮೇಯರ್ ಸ್ಥಾನ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ‌. ಆ‌ ಮೂಲಕ ಆರ್.ಅಶೋಕ್ ಅಸಮಾಧಾನ ಶಮನಕ್ಕೆ ಬಿಜೆಪಿ ಮುಂದಾಗಿದೆ‌ ಎನ್ನಲಾಗಿದೆ.

ವಿಧಾನಸೌಧದಲ್ಲಿನ ಎಸ್.ಆರ್.ವಿಶ್ವನಾಥ್ ಚೇಂಬರ್‌ನಲ್ಲಿ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ಎಸ್.ರಘು, ಎಸ್.ಆರ್.ವಿಶ್ವನಾಥ್, ರವಿ ಸುಬ್ರಮಣ್ಯ, ಪರಿಷತ್ ಸದಸ್ಯ ರವಿಕುಮಾರ್ ಮತ್ತು ಮುನಿರಾಜು ಪಾಲ್ಗೊಂಡಿದ್ದರು.

ABOUT THE AUTHOR

...view details