ಕರ್ನಾಟಕ

karnataka

ETV Bharat / state

ಹಲಸೂರು ಕೆರೆಯಂಗಳದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಮೇಯರ್ ಚಾಲನೆ - ಗಿಡ ನೆಡುವ ಕಾರ್ಯಕ್ಕೆ ಮೇಯರ್ ಗೌತಮ್ ಕುಮಾರ್

ಬೆಂಗಳೂರಿನ ಹಲಸೂರು ಕೆರೆಯ ಸ್ವಚ್ಛತಾ ಕಾರ್ಯದ ಬಳಿಕ, ಕೆರೆ ಆವರಣದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್​ ಚಾಲನೆ ನೀಡಿದರು. ಈ ಕೆರೆ ಆವರಣದಲ್ಲಿ ಬಿಬಿಎಂಪಿ ಹಾಗೂ ಕೋಟಿ ವೃಕ್ಷ ಸೈನ್ಯ ಸಹಯೋಗದಲ್ಲಿ 8 ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ.

Mayor drive plant planting program in Halasuru lake surrounding
ಹಲಸೂರು ಕೆರೆಯಂಗಳದಲ್ಲಿ ಗಿಡ ನೆಡುವ ಕಾರ್ಯಕ್ಕೆ ಮೇಯರ್ ಚಾಲನೆ

By

Published : Jan 12, 2020, 4:49 AM IST

ಬೆಂಗಳೂರು:ಹಲಸೂರು ಕೆರೆಉ ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯದ ಬಳಿಕ, ಕೆರೆ ಆವರಣದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್​ ಚಾಲನೆ ನೀಡಿದರು.

ಹಲಸೂರು ಕೆರೆ ಆವರಣದಲ್ಲಿ ಸಸಿ ನೆಡುವ ಅಭಿಯಾನದಲ್ಲಿ ಪಾಲ್ಗೊಂಡು ನಾಗರಿಕರು

ಹಲಸೂರು ಕೆರೆ ಆವರಣದಲ್ಲಿ ಬಿಬಿಎಂಪಿ ಹಾಗೂ ಕೋಟಿ ವೃಕ್ಷ ಸೈನ್ಯ ಸಹಯೋಗದಲ್ಲಿ 8 ಸಾವಿರ ವಿವಿಧ ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ. ಈ ಸಂಸ್ಥೆಯು ಎರಡು ವರ್ಷಗಳ ಕಾಲ ಪೋಷಣೆ ಮಾಡಲಿದೆ. ಸಸಿಗಳನ್ನು ಸೆಟ್ರೀಸ್ ಮತ್ತು ಬಯೋಟಾ ಸಾಯಿಲ್ ಸಂಸ್ಥೆ ವಿತರಿಸಿದೆ.

ಹಲಸೂರು ಕೆರೆ ಆವರಣದಲ್ಲಿ ಸಸಿ ನೆಡುವ ಅಭಿಯಾನದಲ್ಲಿ ಪಾಲ್ಗೊಂಡು ನಾಗರಿಕರು
ಹಲಸೂರು ಕೆರೆ ಆವರಣದಲ್ಲಿ ಸಸಿ ನೆಡುವ ಅಭಿಯಾನಕ್ಕೆ ಬಿಬಿಎಂಪಿ ಮೇಯರ್ ಅವರಿಂದ ಚಾಲನೆ

ಮೇಯರ್ ಗೌತಮ್ ಕುಮಾರ್ ಮಾತನಾಡಿ, ನಗರವನ್ನು ಹಸಿರುಮಯವಾಗಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಪಾಲಿಕೆ ವತಿಯಿಂದ ಸಸಿಗಳನ್ನು ನೆಡಲಾಗುತ್ತಿದೆ ಎಂದು ತಿಳಿಸಿದರು.

ಸಂಸದ ಪಿಸಿ ಮೋಹಮ್, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಇತರರು ಭಾಗಿಯಾಗಿದ್ದರು.

ABOUT THE AUTHOR

...view details