ಬೆಂಗಳೂರು: ಮೇಯರ್ ಗೌತಮ್ ಕುಮಾರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ನ್ನು ಭೇಟಿಯಾಗಿ ಗಣೇಶೋತ್ಸವ ಆಚರಣೆ ಮಾರ್ಗಸೂಚಿಯನ್ನು ಮಾರ್ಪಾಡಿಸುವಂತೆ ಮನವಿ ಮಾಡಿದರು.
ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಮ್.ವಿಜಯ್ ಭಾಸ್ಕರ್ನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮೇಯರ್ ಗೌತಮ್ ಕುಮಾರ್ಗೆ ಗಣೇಶೋತ್ಸವ ಸಮಿತಿಯ ಪ್ರಕಾಶ್ ರಾಜ್ ಸಾತ್ ನೀಡಿದ್ದರು. ಭೇಟಿ ಬಳಿಕ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಗಣೇಶೋತ್ಸವ ಆಚರಣೆ ವಿಚಾರದಲ್ಲಿ ಸಾರ್ವಜನಿಕರ ಅಭಿಪ್ರಾಯಗಳ ಮೇರೆಗೆ ಇಂದು ಸಿಎಸ್ ಭೇಟಿ ಮಾಡಿದ್ದೇವೆ. ಮಾರ್ಗಸೂಚಿಗಳಲ್ಲಿ ಕೆಲ ಮಾರ್ಪಾಡು ಮಾಡುವಂತೆ ಕೋರಿದ್ದೇವೆ ಎಂದರು.