ಬೆಂಗಳೂರು :'ನಮ್ಮ ನಡೆ ಶಿಕ್ಷಕರ ಕಡೆ, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಉಳಿದರೆ ಶಿಕ್ಷಣ' ಎಂಬ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಸಾಂಕೇತಿಕ ಪ್ರತಿಭಟನೆಯನ್ನ ಖಾಸಗಿ ಶಾಲೆಗಳು ನಡೆಸುತ್ತಿವೆ.
ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಕನಿಷ್ಟ ಸಹಕಾರ ಹಾಗೂ ಅವರ ಬೆನ್ನಿಗೆ ಶಿಕ್ಷಣ ಸಂಸ್ಥೆಗಳು ನಿಂತು ಶಿಕ್ಷಣದ ವ್ಯವಸ್ಥೆಯಲ್ಲಿ ಅವರನ್ನು ಉಳಿಸಿ, ಗೌರವಿಸುವಂತಹ ಕೆಲಸ ಆಗಬೇಕಾಗಿದೆ ಎಂದು ಎಂಎಲ್‌ಸಿ ಪುಟ್ಟಣ್ಣ ಆಗ್ರಹಿಸಿದರು.
ಮೌರ್ಯ ವೃತ್ತದ ಫ್ರೀಡಂ ಪಾರ್ಕ್ವರೆಗೆ ಶಿಕ್ಷಕರು ಬೃಹತ್ ರ‍್ಯಾಲಿ ನಡೆಸಿದರು. ಈ ವೇಳೆ ಕೈನಲ್ಲಿ ತಟ್ಟೆ ಸೌಟು ಹಿಡಿದು ಸರ್ಕಾರದ ವಿರುದ್ಧ ವ್ಯಂಗ್ಯ ಪ್ರದರ್ಶನ ಮಾಡಿದರು. ತರಕಾರಿ ಗಾಡಿ ತಳ್ಳಿಕೊಂಡು ಶಿಕ್ಷಕರನ್ನು ಶಿಕ್ಷಣ ಮಂತ್ರಿಗಳು ಬೀದಿಗೆ ತಳ್ಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಓದಿ:ಬಿಎಂಟಿಸಿ ಬಸ್ ಹತ್ತಿ 'ನಾನೇ ಸಿಎಂ' ಎಂದ ಮಹಿಳೆ: ಟಿಕೆಟ್ ಖರೀದಿಸದೆ ಸುಮ್ನೆ ಕಿರಿಕ್! ವೈರಲ್ ವಿಡಿಯೋ
ಖಾಸಗಿ ಶಿಕ್ಷಕರ ಬೇಡಿಕೆಗಳು ಇಂತಿವೆ :