ಬೆಂಗಳೂರು: ಆರ್ಥಿಕ ಸಂಕಷ್ಟದ ಸಮಯದಲ್ಲಿ ವಿದ್ಯುತ್, ಆಸ್ತಿ, ನೀರಿನ ತೆರೆಗೆ ಹೆಚ್ಚಳವಾಗಿರುವ ಹಿನ್ನೆಲೆ, ಇಂದು ಬಿಜೆಪಿ ಸರ್ಕಾರದ ನಿಲುವನ್ನ ಖಂಡಿಸಿ ಬೆಂ. ಕೇಂದ್ರ ದಕ್ಷಿಣ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಂದ ಗಾಂಧಿ ಸರ್ಕಲ್ ಬಳಿ ಪ್ರತಿಭಟನೆ ನೆಡೆಸಲಾಯಿತು.
ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ ಪ್ರತಿಭಟನೆಯಲ್ಲಿ ರಾಮಲಿಂಗರೆಡ್ಡಿ, ಸಲೀ ಅಹಮ್ಮದ್, ಡಿಕೆ ಹರಿಪ್ರಸಾದ್ ಭಾಗಿಯಾಗಿ, ಸರ್ಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಲಾಯಿತು. ಈ ವೇಳೆ ರಾಜ್ಯಸಭಾ ಸದಸ್ಯ ಕಾಂಗ್ರೆಸ್ ಮುಖಂಡ, ಜಿ.ಸಿ ಚಂದ್ರಶೇಖರ್ ಮಾತನಾಡಿ, ಕೊರೊನಾ ಮಾಹಾಮಾರಿಯಿಂದ 8 ತಿಂಗಳಿನಿಂದ ಜನರು ತತ್ತರಿಸಿ ಹೋಗಿದ್ದಾರೆ.
ಆದರೆ ಸರ್ಕಾರ ಮಾತ್ರ ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬದಲಾಗಿ ವಿದ್ಯುತ್, ನೀರು, ಆಸ್ತಿ ತೆರಿಗೆಯನ್ನ ಹೆಚ್ಚಳ ಮಾಡಿದ್ದಾರೆ. ವಿದ್ಯುತ್ ಬೆಲೆಯನ್ನ 50 ರಿಂದ 80 ಪೈಸೆ ಹೆಚ್ಚಳ ಮಾಡಿದ್ದಾರೆ. ದೆಹಲಿಯಲ್ಲಿ ವಿದ್ಯುತ್ ದರ ಕಡಿಮೆ ಇದೆ. ಅಂದರೆ ನಮ್ಮ ರಾಜ್ಯದಲ್ಲಿ ಮಾತ್ರ 20 % ರಷ್ಟು ತೆರಿಗೆ ಹಾಕುತ್ತಿದ್ದಾರೆ. ಪೆಟ್ರೋಲ್-ಡಿಸೇಲ್ ಬೆಲೆಯನ್ನ ಹೆಚ್ಚಿಸಿದ್ದಾರೆ. 25 % ತೆರಿಗೆಯನ್ನ ಜನರ ಮೇಲೆ ವಿಧಿಸಿ ನಿಗಮಗಳ ಮೇಲೆ ಹಣ ಹೂಡಿಕೆ ಮಾಡಲು ಹೋಗಿದ್ದಾರೆ. ನಮ್ಮ ರಾಜ್ಯದಲ್ಲಿ ಸಾರಿಗೆ ನೌಕರರಿಗೆ, ಅಂಗಡಿನವಾಡಿ ನೌಕರರಿಗೆ ಸರಿಯಾದ ಸಂಭಳವಿಲ್ಲ. ಇಂಥಹ ಸಮಸ್ಯೆಗಳನ್ನ ಸರ್ಕಾರ ಬಗೆಹರಿಸುವ ಬದಲು ನಿಗಮ ಸ್ಥಾಪಿಸಲು ಹೊರಟಿದ್ದಾರೆ ಎಂದರು.
ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ. ಕರ್ನಾಟಕ ಸರ್ಕಾರದಲ್ಲಿ ಆಗುತ್ತಿರುವ ಬೆಳವಣಿಗೆಗೆ ಕಾರಣ ವಿಜಯೇಂದ್ರ, ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಹೆಸರಿಗೆ ಮಾತ್ರ ಯಡಿಯೂರಪ್ಪ ಕೆಲಸ ಮಾಡುತ್ತಿದ್ದಾರೆ. ವಿಜಯೇಂದ್ರ ಮುಖ್ಯಮಂತ್ರಿಯಂತೆ ವರ್ತಿಸುತ್ತಿದ್ದಾರೆ. ಕೋಮು ಗಲಭೆಯನ್ನ ಬಿಜೆಪಿ ಮಾಡುತ್ತಿದೆ ಎಂದರು.
ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ. ಕಾಂಗ್ರೆಸ್ ಮುಖಂಡ ಡಿ.ಕೆ ಹರಿಪ್ರಸಾದ್ ಮತನಾಡಿ, ಬಿಜೆಪಿ ಸರ್ಕಾರ ಜನರ ರಕ್ತ ಹೀರುವಂತಹ ಕೆಲಸ ಮಾಡುತ್ತಿದೆ. ಬಿಜೆಪಿ ವಿರುದ್ದ ಪ್ರತಿಭಟಿಸಲಿಲ್ಲ ಎಂದರೆ ರಾಜಧಾನಿ ತನ್ನ ಹೆಸರನ್ನ ಕಳೆದುಕೊಳ್ಳುತ್ತದೆ ಪೆಟ್ರೋಲ್ ದರ ಊಹಿಸದ ಮಟ್ಟಕ್ಕೆ ಹೆಚ್ಚಾಗುತ್ತಿದೆ. ಅಕ್ಕಿ, ರಾಗಿ, ಬೇಳೆಯ ಬೆಲೆ ಇಂದು ಜಾಸ್ತಿಯಾಗಿದೆ.
ಕೊರೊನಾ ವೇಳೆ ಮೋದಿ 20 ಲಕ್ಷ ಮಂಜೂರು ಮಾಡಿದ್ದರು. ಆದರೆ ಆ ಹಣ ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂಬ ಮಾಹಿತಿ ಇಲ್ಲ. ಮೋದಿಯವರಿಗೆ ಯಾವ ರಾಜ್ಯಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎನ್ನುವ ಅರಿವಿಲ್ಲ. ರೈತರ ವಿರುದ್ದ ಬಿಜೆಪಿ ದರ್ಪ ತೋರಿಸುತ್ತಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನೆಡೆಸಿದರು.
ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ. ಮಾಜಿ ಸಚಿವ, ಶಾಸಕ ರಾಮಲಿಂಗರೆಡ್ಡಿ ಈ ವೇಳೆ ಮಾತನಾಡಿ, ವಿದ್ಯುತ್ ತೆರೆಗೆಯನ್ನ ಹೆಚ್ಚು ಮಾಡಿದ್ದಾರೆ. ನೀರಿನ ಬೆಲೆಯನ್ನ ಗಗನಕ್ಕೇರಿಸುವ ಹುನ್ನಾರ ಮಾಡುತ್ತಿದೆ.
ನರೇಂದ್ರ ಮೋದಿ ಹುಟ್ಟು ಸುಳ್ಳುಗಾರ:
ಚುನಾವಣೆ ವೇಳೆ ಕೊಟ್ಟ ಆಶ್ವಾಸನೆಗಳು ಒಂದು ಕೂಡ ನೆರೆವೇರಿಲ್ಲ, ಸುಳ್ಳು ಹೇಳುವ ಸ್ಪರ್ಧೆ ಇಟ್ಟರೆ ಮೋದಿ ಮೊದಲು ಗೆಲ್ತಾರೆ. ಭ್ರಷ್ಟಚಾರದಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದೆ. ಜಿಡಿಪಿಯನ್ನ ಕೆಳಗೆ ಇಳಿಸುವ ಮೊದಲ ಸ್ಥಾನದಲ್ಲಿ ಮೋದಿ ಇದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗಿದೆ. ನಮ್ಮ ಸರ್ಕಾರ ಇದ್ದಾಗ ಜನಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಬೆಲೆ ಏರಿಕೆ ಮಾಡುತ್ತಿದ್ದೆವು. ಆದರೆ ಬಿಜೆಪಿ ಜನರ ಮೇಲೆ ಚಪಡಿ ಎಳೆಯುವ ಕೆಲಸ ಮಾಡುತ್ತಿದೆ. ದೇಶದಲ್ಲಿ ಜನರು ಲಂಚ ಕೊಟ್ಟು ಕೆಲಸ ಮಾಡಿಸಿಕೊಂಡು ಬರುವ ಸರ್ಕಾರ ಇದಾಗಿದೆ. ಜನರಿಗೆ ಬಿಜೆಪಿ ಸರ್ಕಾರದಿಂದ ತೊಂದರೆ ಉಂಟಾಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ರಿಸ್ವಾನ್ ಹರ್ಷದ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿಗರು ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಅದರ ವಿರುದ್ದ ನಾವು ಧ್ವನಿ ಎತ್ತುತ್ತಿದ್ದೇವೆ. ಬಿಜೆಪಿ ಸರ್ಕಾರ ಯಾವ ಆಧಾರದ ಮೇಲೆ ನೀರು, ವಿದ್ಯುತ್, ಆಸ್ತಿ ತೆರಿಗೆಗಳನ್ನ ಹೆಚ್ಚು ಮಾಡಿದ್ದೀರಾ?.
ಯುವಕರಿಗೆ ಉದ್ಯೋಗ ಸೃಷ್ಠಿ ಮಾಡುತ್ತೇವೆ ಎಂದು ಹೇಳಿದ್ದಿರಿ. ಎಲ್ಲಿದೆ ಉದ್ಯೋಗ? ಬೆಲೆ ಜಾಸ್ತಿ ಮಾಡಿ ಜಿಡಿಪಿ ಬೆಲೆಯನ್ನ ಕೆಳಗಿಳಿಸುತ್ತಿದ್ದಾರೆ.
ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ. ಕೊರೊನಾ ವೇಳೆ ಬಿಜೆಪಿ ಸರ್ಕಾರ ದುಡ್ಡು ಮಾಡಿಕೊಂಡಿದೆ. ಜಾತಿಗೊಂದು ಧರ್ಮಮಾಡಲು ಹೊರಟಿರುವುದು ಸರಿಯಲ್ಲ. ಹಿಂದುಳಿದ ವರ್ಗದ ಬಗ್ಗೆ ನಿಗಮವನ್ನ ಯಾಕೆ ಸ್ಥಾಪಿಸಿಲ್ಲ?. ರಾಜಕೀಯ ಮಾಡಲು ನಿಗಮ ಮಾಡಲು ಮುಂದಾಗಿದ್ದೀರಾ?. ಲೂಟಿ ಮಾಡಿಕೊಂಡು ಬಿಜೆಪಿ ಸರ್ಕಾರ ಮಜಾ ಮಾಡಲು ಹೊರಟಿದೆ. ಇದೇ ರೀತಿಯಾಗಿ ಮುಂದುವರೆದರೆ ಮುಂದೆ ಬಿಜೆಪಿ ಸರ್ಕಾರವನ್ನ ಉರುಳಿಸಿ ಕಾಂಗ್ರೆಸ್ ತರುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ. ಕಾಂಗ್ರೆಸ್ ಮುಖಂಡ ಉಗ್ರಪ್ಪ ಮಾತನಾಡಿ, ಸಮೀಕ್ಷೆಯ ಪ್ರಕಾರ ಭ್ರಷ್ಟಚಾರ ರಾಷ್ಟ್ರ ಅಂದರೆ ಭಾರತ ಎಂದು ಉಲ್ಲೇಖಿಸಲಾಗಿದೆ. 2014 ರಲ್ಲಿ ಅಧಿಕಾರಕ್ಕೆ ಬರುವ ವೇಳೆ ದೇಶದ ಭ್ರಷ್ಟಾಚಾರ ನಿಲ್ಲಿಸುತ್ತೇನೆ. ಕಪ್ಪು ಹಣ ನಾನು ನಿಲ್ಲಿಸುತ್ತೇನೆ. ಬಡವರ ಕುಟುಂಬಕ್ಕೆ 15 ಸಾವಿರ ಕೊಡುತ್ತೇವೆ ಎಂದು ಹೇಳಿದ್ದರು. ಇಲ್ಲಿಯವರೆಗೂ ಈ ಕೆಲಸ ನೆರವೇರಿಲ್ಲ. ಜನಸಮಾನ್ಯರ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಟ್ಯಾಕ್ಸ್ ಹಾಕುತ್ತಿದ್ದಾರೆ. ಲಾಕ್ ಡೌನ್ ವೇಳೆ ಕೊರೊನಾ ಹೋಗಾಲಾಡಿಸೋಣ ಅಂತ ಮೋದಿ ಹೇಳಿದರು. ಇದೀಗ 9 ಲಕ್ಷ ಕೇಸ್ ಗಳು ನಮ್ಮ ರಾಜ್ಯದಲ್ಲಿವೆ. ಸುಳ್ಳು ಹೇಳುವ ಸ್ಪರ್ಧೆಯಲ್ಲಿ ನೋಬೆಲ್ ಪ್ರಶಸ್ತಿ ಮೋದಿಗೆ ಸಿಗುತ್ತದೆ. ರಾಜ್ಯದಲ್ಲಿ ಅದ್ಬುತ ಸುಳ್ಳುಗಾರ ಎನ್ನುವ ಪ್ರಶಸ್ತಿ ಯಡಿಯೂರಪ್ಪನಿಗೆ ಸಿಗುತ್ತದೆ ಎಂದರು.