ಬೆಂಗಳೂರು: ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ ಪ್ರಕರಣ ಸಂಬಂಧ ಕಂಪನಿಯ ಮಾಲೀಕರ ಮೇಲೆ ಸರಣಿ ದೂರುಗಳು ದಾಖಲಾಗಿವೆ.
ಬೆಂಗಳೂರಿನಲ್ಲಿ ಅಗ್ನಿ ದುರಂತ: ಕಮಲ, ಸಜ್ಜನ್ ರಾಜ್ ವಿರುದ್ಧ ಸರಣಿ ಕೇಸ್ - guddedahalli fire breaks out incident
ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತ ಸಂಬಂಧ ಕಂಪನಿಯ ಮಾಲೀಕರಾದ ಕಮಲ ಮತ್ತು ಸಜ್ಜನ್ ರಾಜ್ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿಗಳಾದ ಕಮಲ ಮತ್ತು ಸಜ್ಜನ್ ರಾಜ್ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ನಿನ್ನೆ ಪ್ಲಾಸ್ಟಿಕ್ ಕಂಪನಿಯ ಮಾಲೀಕ ದೂರು ನೀಡಿದ ಕಾರಣ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ.
ಫ್ಯಾಕ್ಟರಿ ಸುತ್ತ ಇರುವ ಮನೆಗಳಿಗೆ ಬೆಂಕಿ ತಗುಲಿದ ಕಾರಣ ಹಾನಿಗೊಳಗಾದ ಬಹಳಷ್ಟು ಮಂದಿ ದೂರು ನೀಡಲು ಮುಂದಾಗಿದ್ದಾರೆ. ಕೆಮಿಕಲ್ ಫ್ಯಾಕ್ಟರಿಯಿಂದ ಐವತ್ತು ಮೀಟರ್ ದೂರದಲ್ಲಿರುವ ಡ್ರೈವ್ ಜೀ ಪಾರ್ಕಿಂಗ್ ಲಾಟ್ ಇದ್ದು, ಎರಡು ಕಾರು ಸುಟ್ಟ ಕಾರಣ ಈ ಸಂಬಂಧ ಒಂದು ಕೇಸ್ ದಾಖಲಾಗಿದೆ. ಬೆಂಕಿ ಕೆನ್ನಾಲಿಗೆಗೆ ಒಟ್ಟು 7 ಕಾರುಗಳು, ಬೈಕ್ ಸುಟ್ಟು ಹೋಗಿವೆ. ಹೀಗಾಗಿ ಫ್ಯಾಕ್ಟರಿ ಮಾಲೀಕನ ಮೇಲೆ ಸರಣಿ ದೂರು ದಾಖಲಾಗುವ ಸಾಧ್ಯತೆ ಇದೆ.
ಇನ್ನು ಕೆಮಿಕಲ್ ಕಾರ್ಖಾನೆ ಬೆಂಕಿ ದುರಂತದಿಂದ, ಹೊಸಗುಡದಹಳ್ಳಿಯ ಹಲವು ಏರಿಯಾಗಳಲ್ಲಿ ಪವರ್ ಕಟ್ ಆಗಿದೆ. ನಿನ್ನೆ ಬೆಳಗ್ಗೆ 11ರಿಂದ ಇಂದು ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಬೆಸ್ಕಾಂ ಅವರು ಇದರ ಬಗ್ಗೆ ನಿಗಾ ವಹಿಸಿದ್ದಾರೆ.