ಬೆಂಗಳೂರು: ಮಸಾಜ್ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜಯನಗರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಬಂಧಿತನನ್ನು ರವೀಂದ್ರ ಶೆಟ್ಟಿ ಎಂದು ಗುರುತಿಸಲಾಗಿದೆ. ಜಯನಗರದ ಪಾರ್ಲರ್ನಲ್ಲಿ ಇತ್ತೀಚೆಗೆ ಈತ ದುಷ್ಕೃತ್ಯ ಎಸಗಿದ್ದ.
ಆರೋಪಿಯ ಸಂಬಂಧಿ ರತ್ನಾವತಿ ಮತ್ತು ಜಗದೀಶ್ ಎಂಬುವವರಿಗೆ ಸೇರಿದ ಸಲೂನ್ನಲ್ಲಿ ಘಟನೆ ನಡೆದಿದೆ. ಈತ ಪದೇ ಪದೇ ಸಲೂನ್ಗೆ ಬಂದು ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ಫೆಬ್ರವರಿ 14ರಂದು ದುಷ್ಕೃತ್ಯ ಎಸಗಿದ್ದಾನೆ. ಅಸಭ್ಯವಾಗಿ ವರ್ತಿಸಿದ್ದಲ್ಲದೇ ಜಾತಿ ನಿಂದನೆ ಮಾಡಿರುವುದಾಗಿಯೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಅತ್ಯಾಚಾರ ಮತ್ತು ಜಾತಿನಿಂದನೆಯಡಿ ಪ್ರಕರಣ ದಾಖಲಾಗಿತ್ತು.