ಕರ್ನಾಟಕ

karnataka

ETV Bharat / state

ಉಚಿತ ಸಾಮೂಹಿಕ ವಿವಾಹದ ಬಗ್ಗೆ ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ - ರಾಜ್ಯ ಸರ್ಕಾರದ ಉಚಿತ‌ ಸಾಮೂಹಿಕ ವಿವಾಹ

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯ ಸರ್ಕಾರದ ಉಚಿತ‌ ಸಾಮೂಹಿಕ ವಿವಾಹಕ್ಕೆ ಬಳಕೆಯಾಗುವ ಹಣದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಸದಸ್ಯರು ಅವಿವಾಹಿತ ಯುವಕ ಯುವತಿಯರ ಬಗ್ಗೆ ಸ್ವಾರಸ್ಯಕರ ಚರ್ಚೆ ನಡೆಸಿದರು.

parishat
ಪರಿಷತ್​ನಲ್ಲಿ ಇನ್ನೂ ಮದುವೆಯಾಗದೆ ಇರುವ ಹುಡುಗ - ಹುಡುಗಿಯರ ಬಗ್ಗೆ ಬಿಸಿ ಬಿಸಿ ಚರ್ಚೆ..!

By

Published : Mar 6, 2020, 6:52 PM IST

ಬೆಂಗಳೂರು:ವಿಧಾನ ಮಂಡಲದ ಮೇಲ್ಮನೆ ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯ ಸರ್ಕಾರದ ಉಚಿತ‌ ಸಾಮೂಹಿಕ ವಿವಾಹಕ್ಕೆ ಬಳಕೆಯಾಗುವ ಹಣದ ಬಗೆಗಿನ‌ ಚರ್ಚೆ ನಡೆಯಿತು. ಈ ವೇಳೆ ಸದಸ್ಯರು ಅವಿವಾಹಿತ ಹುಡುಗ- ಹುಡುಗಿಯರ ಬಗ್ಗೆ ಕುತೂಹಲಕಾರಿ ಚರ್ಚೆ ನಡೆಸಿದರು.

ವಿಧಾನ ಪರಿಷತ್ ಕಲಾಪದಲ್ಲಿ ಮುಜರಾಯಿ ಇಲಾಖೆಯಿಂದ‌‌‌ ಆಯೋಜಿಸುವ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಜೆಡಿಎಸ್ ಸದಸ್ಯ ಶರವಣ ಪ್ರಸ್ತಾಪಿಸಿದರು. ಸಾಮೂಹಿಕ ವಿವಾಹಕ್ಕೆ ದೇವಸ್ಥಾನದ ಹುಂಡಿ ಹಣವನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಹುಂಡಿ‌ಹಣ ದೇವಾಲಯದ ಸಿಬ್ಬಂದಿಗೆ ಸಾಲುತ್ತಿಲ್ಲ. ಅಂತಹದ್ದರಲ್ಲಿ‌ ಹುಂಡಿ ಹಣ ಬಳಸಿ ಪುಕ್ಕಟೆ ಪ್ರಚಾರ ಪಡೆದುಕೊಳ್ಳುತ್ತಿದ್ದೀರಿ. ಅದರ ಬದಲು ಸರ್ಕಾರದಿಂದಲೇ ಹಣ ಕೊಡಿ ಎಂದರು.

ಇದಕ್ಕೆ ಕಾಂಗ್ರೆಸ್​ನ ಜಯಮಾಲಾ ಹುಂಡಿಯದ್ದೋ‌ ಸರ್ಕಾರದ್ದೋ. ಆದರೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಒಳ್ಳೆಯ ಯೋಜನೆ ಎಂದು‌ ರಾಜ್ಯ ಸರ್ಕಾರದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು‌ ಸ್ವಾಗತಿಸಿದರು. ನಮ್ಮಲ್ಲಿ ಎಷ್ಟೋ ಹೆಣ್ಣು ಮಕ್ಕಳು ಮದುವೆಯಾಗದೇ ಹಾಗೆಯೇ ಉಳಿದಿದ್ದಾರೆ. ಇದೀಗ ಸರ್ಕಾರ ಉಚಿತ ವಿವಾಹ ಕಾರ್ಯಕ್ರಮ ಜಾರಿ ಮಾಡಿರೋದು ಅವರಿಗೆ ತುಂಬಾ ಅನುಕೂಲ ಆಗಿದೆ ಎಂದರು.

ಜಯಮಾಲ ಅವರು ಹೇಳುತ್ತಿದ್ದಂತೆ ಎದ್ದು ನಿಂತ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಆ ರೀತಿಯ ಪರಿಸ್ಥಿತಿ ಈಗ ಇಲ್ಲ. ನಮ್ಮ ಕಡೆ ಹುಡುಗರಿಗೆ ಹುಡುಗಿಯರು ಸಿಗುತ್ತಿಲ್ಲ ಎಂದರು. ಮಾಧುಸ್ವಾಮಿ ಹೇಳಿಕೆಗೆ ಸಚಿವ ಸಿ.ಟಿ‌ ರವಿ ಪ್ರತಿಕ್ರಿಯಿಸಿ, ಬನ್ನಿ ನಮ್ಮ ಕಡೆ ಹುಡುಗಿಯರು ಇದ್ದಾರೆ, ಬೇಕಿದ್ದರೆ ನಿಮ್ಮ ಹುಡುಗರಿಗೆ ಹುಡುಗಿಯರನ್ನು ಹುಡುಕಿ ಕೊಡುತ್ತೇನೆ ಎಂದರು.

ABOUT THE AUTHOR

...view details