ಬೆಂಗಳೂರು: ಮಸ್ಕಿ ಹಾಗೂ ಬಸವಕಲ್ಯಾಣ ಉಪ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸಮ್ಮುಖದಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆ ಕುರಿತು ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು. ಈ ಸಭೆಯಲ್ಲಿ ಮಸ್ಕಿ ಟಿಕೆಟ್ ಆಕಾಂಕ್ಷಿಯಾದ ಪ್ರತಾಪ್ ಗೌಡ ಪಾಟೀಲ್ ಮತ್ತು ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿ ಶರಣು ಸಲಗರ್ ಕಾಣಿಸಿಕೊಂಡರು.
ಬಿ.ಎಲ್ ಸಂತೋಷ್ ಭೇಟಿ ಮಾಡಿದ ಮಸ್ಕಿ, ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿಗಳು - ಬಸವಕಲ್ಯಾಣ ಟಿಕೆಟ್ ಆಕಾಂಕ್ಷಿ ಶರಣು ಸಲಗರ್
ನಗರದ ಖಾಸಗಿ ಹೋಟೆಲ್ನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆ ಕುರಿತು ಸಭೆ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಪ್ರಮುಖರು ಹಾಜರಿದ್ದರು. ಈ ಸಭೆಯಲ್ಲಿ ಮಸ್ಕಿ ಟಿಕೆಟ್ ಆಕಾಂಕ್ಷಿಯಾದ ಪ್ರತಾಪ್ ಗೌಡ ಪಾಟೀಲ್ ಮತ್ತು ಬಸವಕಲ್ಯಾಣ ಡಿಕೆಟ್ ಆಕಾಂಕ್ಷಿ ಶರಣು ಸಲಗರ್ ಕಾಣಿಸಿಕೊಂಡರು.
ಬಸವಕಲ್ಯಾಣಕ್ಕೆ ಶಿರಾ ಕ್ಷೇತ್ರದ ತಂತ್ರ ಅನುಸರಿಸಲು ಮುಂದಾಗಿರುವ ಕಾರಣ ಯುವ ನಾಯಕ ಶರಣು ಸಲಗರ್ ಪರ ನಾಯಕರ ಒಲವಿದೆ. ಲಾಕ್ ಡೌನ್ ಸಮಯದಲ್ಲಿ ಅವರು ಜನರ ನೆರವಿಗೆ ಧಾವಿಸಿದ್ದೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕೆಲ ನಾಯಕರ ಸೂಚನೆ ಮೇರೆಗೆ ಈ ಇಬ್ಬರು ಟಿಕೆಟ್ ಆಕಾಂಕ್ಷೆಗಳು ಸಭೆ ನಡೆದ ಸ್ಥಳಕ್ಕೆ ಬಂದಿದ್ದರು ಎನ್ನಲಾಗಿದೆ.
ಈ ಇಬ್ಬರು ಆಕಾಂಕ್ಷಿಗಳ ಬಗ್ಗೆ ಬಿ.ಎಲ್ ಸಂತೋಷ್ ಗಮನಕ್ಕೂ ತರಲಾಗಿದ್ದು, ಮಸ್ಕಿ ಕ್ಷೇತ್ರದಲ್ಲಿ ಅನಿವಾರ್ಯ ಆಯ್ಕೆ ಇದೆ. ಹಾಗಾಗಿ ಅಲ್ಲಿನ ಅಭ್ಯರ್ಥಿ ಆಯ್ಕೆ ಬಗ್ಗೆ ಹೆಚ್ಚು ಸಮಾಲೋಚನೆ ನಡೆಯಲಿಲ್ಲ. ಆದರೆ ಶರಣು ಸಲಗರ್ ಬಗ್ಗೆ ಪ್ರಸ್ತಾಪಿಸಿ ಅವರನ್ನು ಪರಿಚಯ ಮಾಡಿಕೊಡಲಾಯಿತು ಎನ್ನಲಾಗುತ್ತಿದೆ. ಸಂತೋಷ್ ಭೇಟಿಗಾಗಿಯೇ ಈ ಇಬ್ಬರು ಆಕಾಂಕ್ಷಿಗಳು ಸಭೆ ನಡೆದ ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗುತ್ತಿದೆ.