ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಮಾಸ್ಕ್​​ ದಿನಾಚರಣೆ: ಬೀದಿ ಬದಿ ವ್ಯಾಪಾರಿಗಳಿಗೆ ಅಧಿಕಾರಿಗಳಿಂದ ಮಾಸ್ಕ್ ವಿತರಣೆ

ಇಂದು ರಾಜ್ಯ ಸರ್ಕಾರದ ಅದೇಶದಂತೆ ಬೆಂಗಳೂರಿನ ಹಲವೆಡೆ ಬೀದಿ ಬದಿ ವ್ಯಾಪಾರಿಗಳು ಮತ್ತು ಪಾದಚಾರಿಗಳಿಗೆ ಮಾಸ್ಕ್ ವಿತರಿಸಿ ಮಾಸ್ಕ್​​ ದಿನಾಚರಣೆ ಆಚರಿಸಲಾಯಿತು.

dsd
ಬೆಂಗಳೂರಿನಲ್ಲಿ ಮಾಸ್ಕ್​​ ದಿನಾಚರಣೆ

By

Published : Jun 18, 2020, 6:12 PM IST

ಬೆಂಗಳೂರು: ಪೂರ್ವ ತಾಲೂಕು ಆಡಳಿತ ವತಿಯಿಂದ ಮಾಸ್ಕ್ ಡೇ ಅಂಗವಾಗಿ ಕಾಲ್ನಡಿಗೆ ಜಾಥ ನಡೆಸುವ ಮೂಲಕ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಯಿತು.

ಬೆಂಗಳೂರಿನಲ್ಲಿ ಮಾಸ್ಕ್​​ ದಿನಾಚರಣೆ

ಕೆಆರ್ ಪುರ ಬಸ್ ನಿಲ್ದಾಣ, ಸರ್ಕಾರಿ ಕಾಲೇಜ್, ಎಕ್ಸ್ ಟೆನ್ಷನ್, ಕೃಷ್ಣರಾಜಪುರ ಮಾರ್ಕೇಟ್ ನ ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಿಸಲಾಯಿತು. ನಂತರ ಮಾತನಾಡಿದ ತಹಶಿಲ್ದಾರ್​ ಎನ್.ತೇಜಸ್ ಕುಮಾರ್, ಮಾಸ್ಕ್ ದಿನದ ಅಂಗವಾಗಿ ಸರ್ಕಾರದ ಆದೇಶದಂತೆ ತಾಲೂಕು ಕಚೇರಿಯಿಂದ ಸುಮಾರು ಐದು ಕಿ.ಮೀ ವರೆಗೆ ಜಾಥ ನಡೆಸಿ ಮಾಸ್ಕ್ ವಿತರಣೆ ಮಾಡಲಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಇನ್ನು ನಗರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಜಿಎನ್ ಶಿವಮೂರ್ತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಕೆಂಪೇಗೌಡ ರಸ್ತೆಗಿಳಿದು ಜನರಿಗೆ ಮಾಸ್ಕ್ ಬಳಸುವುದರ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮಾಸ್ಕ್ ಧರಿಸದೆ ರಸ್ತೆಗೆ ಇಳಿದಿದ್ದ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಜಿಲ್ಲಾಧಿಕಾರಿ ಶಿವಕುಮಾರ್ ಉಚಿತವಾಗಿ ಮಾಸ್ಕ್ ಹಾಗೂ ಚಾಕಲೇಟ್ ನೀಡಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಈ ವೇಳೆ ಕೆಲ ಆರೋಗ್ಯಾಧಿಕಾರಿಗಳು ಹಾಜರಿದ್ದರು.

ABOUT THE AUTHOR

...view details