ಬೆಂಗಳೂರು: ಮಹಾಮಾರಿ ಕೊರೊನಾದಿಂದ ಇಡೀ ದೇಶವೇ ಮನೆಯಲ್ಲಿ ಕೂರುವಂತಾಗಿದೆ, ಇನ್ನು ಸಾಮಾನ್ಯರು ಮಾಸ್ಕ್ , ಸ್ಯಾನಿಟೈಸರ್ ಬಳಕೆ ಮಾಡಿದ್ರೆ ಬಡವರು ಮತ್ತು ನಿರ್ಗತಿಕರು ಇದರ ಅರಿವೇ ಇಲ್ಲದಂತೆ ಇದ್ದರು. ಈ ಹಿನ್ನೆಲೆ ಕಾಂಗ್ರೆಸ್ನ ಯುವ ಮುಖಂಡರು ಇವರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಪೂರೈಕೆ ಮಾಡಿದ್ದಾರೆ.
ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ ಯುವ ಕಾಂಗ್ರೆಸ್ - ಬೆಂಗಳೂರು ಸುದ್ದಿ
ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಆಶಿಕ್ ಗೌಡ ಅವರು ಹಲವೆಡೆ ಬಡವರಿಗೆ ಹಾಗೂ ನಿರ್ಗತಿಕರಿಗೆ ಕಿಟ್ ನೀಡಿದ್ದಾರೆ.
![ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ ಯುವ ಕಾಂಗ್ರೆಸ್ ಮಾಸ್ಕ್, ಸ್ಯಾನಿಟೈಸರ್ ವಿತರಣೆ](https://etvbharatimages.akamaized.net/etvbharat/prod-images/768-512-6540417-466-6540417-1585138583267.jpg)
ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಭಾರತೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಆಶಿಕ್ ಗೌಡ ಅವರು ಹಲವೆಡೆ ಬಡವರಿಗೆ ಹಾಗೂ ನಿರ್ಗತಿಕರಿಗೆ ಕಿಟ್ ನೀಡಿದ್ದಾರೆ.
ಅಲ್ಲದೆ, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ, ಆಟೋ ರಾಜ ಆಶ್ರಮ ಸೇರಿದಂತೆ ಕೆಲ ಪೊಲೀಸ್ ಪಡೆಗಳಿಗೆ ಈ ಕಿಟ್ ವಿತರಣೆ ಮಾಡಲಾಗಿದೆ.