ಕರ್ನಾಟಕ

karnataka

ETV Bharat / state

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ - ಸೋಮಶೇಖರ್ ಮುಖಾಮುಖಿ - ಸುತ್ತೂರಿನಲ್ಲಿ ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮ

ಸಮ್ಮಿಶ್ರ ಸರ್ಕಾರ ಪತನದ ನಂತರ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದ ಎಸ್‌ ಟಿ ಸೋಮಶೇಖರ್ ಮತ್ತು ಸಿದ್ದರಾಮಯ್ಯ ಹಲವು ದಿನಗಳ ನಂತರ ವೇದಿಕೆ ಹಂಚಿಕೊಂಡರು.

Masika mass wedding event in Mysore
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ-ಸೋಮಶೇಖರ್ ಮುಖಾಮುಖಿ

By

Published : Feb 9, 2021, 12:36 PM IST

Updated : Feb 9, 2021, 2:57 PM IST

ಮೈಸೂರು: ಸುತ್ತೂರಿನಲ್ಲಿ ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಎಸ್​​ ಟಿ ಸೋಮಶೇಖರ್ ಭಾಗಿಯಾಗಿದ್ದರು‌.

ಸಮ್ಮಿಶ್ರ ಸರ್ಕಾರ ಪತನದ ನಂತರ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದ ಎಸ್‌ ಟಿ ಸೋಮಶೇಖರ್ ಮತ್ತು ಸಿದ್ದರಾಮಯ್ಯ ಹಲವು ದಿನಗಳ ನಂತರ ವೇದಿಕೆ ಹಂಚಿಕೊಂಡರು. ಇಬ್ಬರು ಪರಸ್ಪರ ಕೈ ಮುಗಿದು ಅಭಿನಂದಿಸಿದರು.

ಸಿದ್ದರಾಮಯ್ಯ - ಸೋಮಶೇಖರ್ ಮುಖಾಮುಖಿ

ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧಿಪತಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಭಾಗಿಯಾಗಿದ್ದರು. ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನ ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. 95ನೇ ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 23 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಓದಿ : ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಆಯ್ಕೆ

Last Updated : Feb 9, 2021, 2:57 PM IST

ABOUT THE AUTHOR

...view details