ಕರ್ನಾಟಕ

karnataka

ETV Bharat / state

ಮದುವೆ ಸಮಾರಂಭಗಳಲ್ಲಿ ಮಾಸ್ಕ್ ಕಾರ್ಯಾಚರಣೆ ಶುರು ಮಾಡಿದ ಮಾರ್ಷಲ್ಸ್ - ಎರಡನೇ ಕೋವಿಡ್ ಅಲೆಯ ಆತಂಕ

ಕೋವಿಡ್ ನಿಯಮ ಪಾಲಿಸದೆ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ ಮದುವೆ ಸಮಾರಂಭಗಳಲ್ಲಿ ಜನರು ಸಾಮಾನ್ಯವಾಗಿ ಓಡಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಬೊಮ್ಮನಹಳ್ಳಿ ಅಪಾರ್ಟ್​ಮೆಂಟ್​​ನಲ್ಲಿ ಪಾರ್ಟಿ ನಡೆಸಿದ ಬಳಿಕ ಕೋವಿಡ್ ಸೋಂಕು ಹರಡಿದ್ದರಿಂದ ಈಗ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ.

mask operation at wedding ceremonies
ಮಾಸ್ಕ್ ಕಾರ್ಯಾಚರಣೆ ಶುರು ಮಾಡಿದ ಮಾರ್ಷಲ್ಸ್

By

Published : Feb 24, 2021, 6:59 PM IST

ಬೆಂಗಳೂರು:ಎರಡನೇ ಕೋವಿಡ್ ಅಲೆಯ ಆತಂಕ ಆರಂಭವಾಗಿರುವ ಹಿನ್ನೆಲೆ, ಕಟ್ಟುನಿಟ್ಟಾಗಿ ಕೋವಿಡ್ ನಿಯಮ ಪರಿಪಾಲನೆಯನ್ನು ಬಿಬಿಎಂಪಿ ಆರಂಭಿಸಿದೆ. ಇಂದಿನಿಂದ ಬಿಬಿಎಂಪಿ ಮಾರ್ಷಲ್ಸ್ ಮದುವೆ ಹಾಲ್​ಗಳಲ್ಲಿ ಜನ ಮಾಸ್ಕ್ ಧರಿಸುವಂತೆ ಎಚ್ಚರಿಸಲು ಮುಂದಾಗಿದ್ದಾರೆ.

ಮಾಸ್ಕ್ ಕಾರ್ಯಾಚರಣೆ ಶುರು ಮಾಡಿದ ಮಾರ್ಷಲ್ಸ್

ಓದಿ: ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿವಾದ ; ಸಹೋದರಿಯರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!

ವಾರ್ನಿಂಗ್ ಬಳಿಕವೂ ಮಾಸ್ಕ್ ಧರಿಸದಿದ್ದರೆ ದಂಡ ಹಾಕುವಂತೆ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಇಂದು ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಹಾಗೂ ಜೆಪಿ ಪಾರ್ಕ್ ಬಳಿಯ ಎಂಎಸ್ ರಾಮಯ್ಯ ಮ್ಯಾರೇಜ್ ಹಾಲ್​ಗಳಲ್ಲಿ ಮಾರ್ಷಲ್ಸ್ ನಿಯೋಜಿಸಲಾಗಿದೆ. ಜನರು ಕೂಡಾ ಸಾಥ್ ನೀಡುತ್ತಿದ್ದು, ನಿಯಮ ಪಾಲಿಸುತ್ತಿದ್ದಾರೆ.

ಮಾಸ್ಕ್ ಕಾರ್ಯಾಚರಣೆ ಶುರು ಮಾಡಿದ ಮಾರ್ಷಲ್ಸ್

ಕೋವಿಡ್ ನಿಯಮ ಪಾಲಿಸದೆ, ಮಾಸ್ಕ್, ಸಾಮಾಜಿಕ ಅಂತರ ಕಾಪಾಡದೆ ಮದುವೆ ಸಮಾರಂಭಗಳಲ್ಲಿ ಜನರು ಸಾಮಾನ್ಯವಾಗಿ ಓಡಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಬೊಮ್ಮನಹಳ್ಳಿ ಅಪಾರ್ಟ್​ಮೆಂಟ್​​ನಲ್ಲಿ ಪಾರ್ಟಿ ನಡೆಸಿದ ಬಳಿಕ ಕೋವಿಡ್ ಸೋಂಕು ಹರಡಿದ್ದರಿಂದ ಈಗ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ.

ಮಾಸ್ಕ್ ಕಾರ್ಯಾಚರಣೆ ಶುರು ಮಾಡಿದ ಮಾರ್ಷಲ್ಸ್

ಹೀಗಾಗಿ ಮದುವೆ ಸಂಭ್ರಮಕ್ಕೂ ಅಡ್ಡಿಯಾಗದಂತೆ, ಕೋವಿಡ್ ಸೋಂಕಿಗೂ ಒಳಗಾಗದಂತೆ ಮಾಸ್ಕ್ ಧರಿಸಿ ನಿಯಮ ಪಾಲಿಸಲು ಬಿಬಿಎಂಪಿ ಕಟ್ಟುನಿಟ್ಟಾಗಿ ನಿಯಮ ಜಾರಿ ಮಾಡುತ್ತಿದೆ.

ಮಾಸ್ಕ್ ಕಾರ್ಯಾಚರಣೆ ಶುರು ಮಾಡಿದ ಮಾರ್ಷಲ್ಸ್

ABOUT THE AUTHOR

...view details