ಬೆಂಗಳೂರು:ದೇಶದೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ನಗರದ ಬಹುತೇಕ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಭರದಿಂದ ಸಾಗಿವೆ.
ಶಿವರಾತ್ರಿ ಪ್ರಯುಕ್ತ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಮೇಲೆ ಮಾರ್ಷಲ್‌ಗಳ ಕಣ್ಗಾವಲು! - Marshall instructs devotees to wear mask
ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನದ ಬಳಿ ಮಾರ್ಷಲ್‌ಗಳು ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸುತ್ತಿದ್ದು, ಮಾಸ್ಕ್ ಹಾಕದವರಿಗೆ ಮುಲಾಜಿಲ್ಲದೇ ದಂಡ ವಿಧಿಸುತ್ತಿದ್ದಾರೆ.

ಭಕ್ತಾದಿಗಳ ಮೇಲೆ ಮಾರ್ಷಲ್‌ಗಳ ಕಣ್ಗಾವಲು
ಭಕ್ತಾದಿಗಳ ಮೇಲೆ ಮಾರ್ಷಲ್‌ಗಳ ಕಣ್ಗಾವಲು ...
ಶಿವರಾತ್ರಿ ಹಬ್ಬದ ಪ್ರಯುಕ್ತ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಾಗಿದೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಮಾರ್ಷಲ್‌ಗಳು ದೇವಸ್ಥಾನದ ಅಂಗಳದಲ್ಲಿ ಕಾವಲು ಕಾಯುತ್ತಿದ್ದಾರೆ.
ಚಾಮರಾಜಪೇಟೆಯ ಮಲೆಮಹದೇಶ್ವರ ದೇವಸ್ಥಾನದ ಬಳಿ ಮಾರ್ಷಲ್‌ಗಳು ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೂಪರ್ ವೈಸರ್ ವೆಂಕಟೇಶ್ ಮೂರ್ತಿ ಮತ್ತು ಅವರ ತಂಡ ದೇವಸ್ಥಾನಗಳ ಬಳಿ ಮಾಸ್ಕ್ ಹಾಕುವಂತೆ ಒತ್ತಾಯಿಸಿದ್ದಾರೆ. ಇನ್ನು ಮಾರ್ಷಲ್‌ಗಳು ಕೂಡ ಮಾಸ್ಕ್ ಹಾಕದವರಿಗೆ ಮುಲಾಜಿಲ್ಲದೇ ದಂಡ ವಿಧಿಸುತ್ತಿದ್ದಾರೆ.