ಕರ್ನಾಟಕ

karnataka

ETV Bharat / state

ಪತಿಯಿಂದ ದೂರವಾಗಿದ್ದ ಮಹಿಳೆಯನ್ನು ವೇಲ್ ಬಿಗಿದು ಕೊಂದ ಪ್ರಿಯಕರ - married woman died in vijaynagar

ತನ್ನ ವಿವಾಹಿತ ಪ್ರೇಯಸಿಯನ್ನು ಪ್ರಿಯಕರನೇ ವೇಲು ಬಿಗಿದು ಕೊಂದು ನಂತರ ತಾನೇ ಪೊಲೀಸ್​ ಠಾಣೆಗೆ ಬಂದು ಮಾಹಿತಿ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

married woman killed by her boyfriend
ಆರೋಪಿ ಮಂಜು

By

Published : Nov 6, 2021, 10:02 PM IST

ಬೆಂಗಳೂರು: ವಿವಾಹಿತ ಮಹಿಳೆಯೊಂದಿಗೆ ಜಗಳ ಮಾಡಿ ವೇಲ್‌ನಿಂದ ಆಕೆಯ ಕತ್ತು ಬಿಗಿದು ಕೊಲೆ ಮಾಡಿದ ಆರೋಪಿ ಪ್ರಿಯಕರನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ಪಟ್ಟೆಗಾರಪಾಳ್ಯದ ನಿವಾಸಿ ಗಾಯತ್ರಿ ಕೊಲೆಯಾದವರು. ಮಂಜು ಪ್ರಸಾದ್ ಬಂಧಿತ. ಪತಿಯಿಂದ ದೂರವಾಗಿದ್ದ ಗಾಯತ್ರಿ ಮನೆ ಕೆಲಸ ಮಾಡಿಕೊಂಡು ವಿಜಯನಗರದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಳು. ಈಕೆಯ ಇಬ್ಬರು ಮಕ್ಕಳು ಪತಿ ಮನೆಯಲ್ಲಿ ವಾಸಿಸುತ್ತಿದ್ದರು.

ಆರೋಪಿ ಮಂಜು

ಪಾಲಿಕೆಯ ಗುತ್ತಿಗೆ ಆಧಾರದ ಮೇಲೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಂಜು, ಕಳೆದ 3 ವರ್ಷಗಳಿಂದ ಗಾಯತ್ರಿ ಜತೆಗೆ ಆತ್ಮೀಯತೆ ಹೊಂದಿದ್ದ. ಆದರೆ ಕಳೆದ 3 ತಿಂಗಳಿಂದ ಆತನಿಗೆ ಯಾವುದೇ ಕೆಲಸ ಇಲ್ಲದೇ ನೊಂದಿದ್ದ. ಶನಿವಾರ ಮಧ್ಯಾಹ್ನ 12 ಗಂಟೆಗೆ ಎಂದಿನಂತೆ ಗಾಯತ್ರಿ ಮನೆಗೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಂಜು, ನಿನ್ನೊಂದಿಗೆ ಇರಲು ನನಗೆ ಇಷ್ಟವಿಲ್ಲ. ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದ. ಒಪ್ಪದ ಗಾಯತ್ರಿ ನನಗೆ ನೀನು ಬೇಕು ಎಂದು ಹಠ ಮಾಡಿದ್ದಳು. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ಉಂಟಾಗಿತ್ತು. ಜಗಳ ತಾರಕಕ್ಕೇರಿದಾಗ ಮನೆಯಲ್ಲಿದ್ದ ವೇಲ್‌ನಿಂದ ಪ್ರೇಯಸಿ ಗಾಯತ್ರಿಯ ಕತ್ತು ಹಿಸುಕಿ ಮಂಜು ಕೊಲೆ ಮಾಡಿದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆ ಮಾಡಿ ಬಳಿಕ ವಿಜಯನಗರ ಠಾಣೆಗೆ ಹಾಜರಾಗಿ ಕೊಲೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದ. ಕೂಡಲೇ ಕೃತ್ಯ ನಡೆದ ಸ್ಥಳಕ್ಕೆ ತೆರಳಿದ ಪೊಲೀಸರು ಗಾಯತ್ರಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಆರೋಪಿ ಮಂಜುನನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಆಫ್ರಿಕಾದ ಸಿಯೆರಾ ಲಿಯೋನ್​ನಲ್ಲಿ ತೈಲ ಟ್ಯಾಂಕರ್ ಸ್ಫೋಟ: 92 ಮಂದಿ ಸಜೀವ ದಹನ

ABOUT THE AUTHOR

...view details