ಕರ್ನಾಟಕ

karnataka

ಬಿಬಿಎಂಪಿ ಟ್ಯಾಕ್ಸ್ ಬಾಕಿ ಉಳಿಸಿಕೊಂಡ ಕಲ್ಯಾಣ ಮಂಟಪಕ್ಕೆ ಬೀಗ ಬೀಳುತ್ತೆ ಹುಷಾರ್!

ಬ್ಯಾಟರಾಯನಪುರ ಉಪ ಕಂದಾಯ ಅಧಿಕಾರಿಯಿಂದ ತೆರಿಗೆ ವಸೂಲಿಗಾಗಿ ಜಪ್ತಿ ಮಾಡಲಾಗ್ತಿದೆ. ಥಣಿಸಂದ್ರ ಮಂಜುನಾಥ ಪ್ಯಾಲೇಸ್ ಮಾಲೀಕರಾದ ಪದ್ಮನಾಭಯ್ಯ ಮತ್ತು ರಾಕೇಶ್ ಪಿ‌ ಕಳೆದ ನಾಲ್ಕು ವರ್ಷದಿಂದ 14,93,424 ರೂ ಬಾಕಿ ಇದ್ದು, ಬಡ್ಡಿ ಸೇರಿ ಈ ಮೊತ್ತ 23,65,424 ಕ್ಕೆ ಏರಿಕೆಯಾಗಿದೆ.

By

Published : Dec 24, 2021, 4:01 PM IST

Published : Dec 24, 2021, 4:01 PM IST

marriage-hall
ಕಲ್ಯಾಣ ಮಂಟಪ

ಬೆಂಗಳೂರು: ಹೇಳಿ ಕೇಳಿ ಮದುವೆ ಸೀಸನ್.. ಬ್ರೇಕ್ ಇಲ್ಲದಂತೆ ಮದುವೆಗಳು ಒಂದರ ಮೇಲೊಂದರಂತೆ ನಡೆಯುತ್ತಲೇ ಇವೆ. ಆದರೆ, ಇಂತಾ ಸೀಸನ್ ಟೈಂ ಅಲ್ಲೇ ಕಲ್ಯಾಣ ಮಂಟಪಕ್ಕೆ ಬೀಗ ಬಿದ್ದಿದೆ.

ಕಲ್ಯಾಣ ಮಂಟಪ

ಹೌದು, ಒಂದೋ ತೆರಿಗೆ ಕಟ್ಟಿ, ಇಲ್ಲ ಬೀಗ ಜಡೀತೇವಿ ಎಂದು ಎಷ್ಟೇ ನೋಟಿಸ್ ಕೊಟ್ಟರೂ ಕ್ಯಾರೇ ಅನ್ನದ ಬ್ಯಾಟರಾಯನಪುರದ ಮಂಜುನಾಥ ಪ್ಯಾಲೇಸ್ ಕಲ್ಯಾಣ ಮಂಟಪಕ್ಕೆ ಬೀಗ ಬಿದ್ದಿದೆ. ತೆರಿಗೆ ಸಂಗ್ರಹಕ್ಕೆ ಪಾಲಿಕೆ ವಿಶೇಷ ಒತ್ತು ನೀಡಿದ್ದು, ತೆರಿಗೆ ಬಾಕಿ ಇಟ್ಟವರನ್ನು ಜಪ್ತಿ ಮಾಡುವ ಮೂಲಕ ಪಾಠ ಕಲಿಸಲಾಗ್ತಿದೆ.

ಬ್ಯಾಟರಾಯನಪುರ ಉಪ ಕಂದಾಯಾಧಿಕಾರಿಯಿಂದ ತೆರಿಗೆ ವಸೂಲಿಗಾಗಿ ಜಪ್ತಿ ಮಾಡಲಾಗ್ತಿದೆ. ಥಣಿಸಂದ್ರ ಮಂಜುನಾಥ ಪ್ಯಾಲೇಸ್ ಮಾಲೀಕರಾದ ಪದ್ಮನಾಭಯ್ಯ ಮತ್ತು ರಾಕೇಶ್ ಪಿ‌ ಕಳೆದ ನಾಲ್ಕು ವರ್ಷದಿಂದ 14,93,424 ರೂ ಬಾಕಿ ಇದ್ದು, ಬಡ್ಡಿ ಸೇರಿ ಈ ಮೊತ್ತ 23,65,424 ಕ್ಕೆ ಏರಿಕೆಯಾಗಿದೆ. ಈ ಹಿನ್ನಲೆ ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶದಂತೆ ಸ್ವತ್ತನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಬ್ಯಾಟರಾಯನಪುರದ ಉಪವಲಯ ಸಹಾಯಕ ಕಂದಾಯಾಧಿಕಾರಿ ತಿಳಿಸಿದ್ದಾರೆ.

ಓದಿ:ಚಾಮರಾಜನಗರ : ಸಾಲ ತೀರಿಸಲು ಹಣ ನೀಡದಿದ್ದಕ್ಕೆ ತಂದೆ ಎದುರೇ ಕತ್ತು ಕೊಯ್ದುಕೊಂಡ ಮಗ

ABOUT THE AUTHOR

...view details