ಬೆಂಗಳೂರು:ಮಂಡ್ಯದ ವೈದ್ಯಕೀಯ ಕಾಲೇಜಿನಲ್ಲಿ ಕೊರತೆ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ.
ಕಾಲೇಜಿನಲ್ಲಿ 16 ವಿಭಾಗಕ್ಕೆ ಅನುಮತಿ ಸಿಕ್ಕಿದೆ. 10 ವಿಭಾಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. 7 ವಿಭಾಗಗಳಿಗೆ 14 ಶಿಕ್ಷಕ ಸಿಬ್ಬಂದಿ ನೀಡಬೇಕು. ಸ್ನಾತಕೋತ್ತರ ಪದವಿ ತರಗತಿ ನಡೆಸಲು ಸಾಧ್ಯವಿಲ್ಲ, ನಿಲ್ಲಿಸಬೇಕೆಂದು ಸೂಚಿಸಿದೆ. 85 ವಿದ್ಯಾರ್ಥಿಗಳು ಈ ಸರ್ಕಾರದ ನೀಡಿದ ಪರವಾನಗಿ ಹಿನ್ನೆಲೆ ಪ್ರವೇಶ ಪಡೆದು ಪಿಜಿ ತರಗತಿ ನಡೆಯುತ್ತಿದೆ. ಈಗ ಪಿಜಿ ತರಬೇತಿ ಪಡೆಯುತ್ತಿರುವವರ ವಿದ್ಯಾರ್ಥಿಗಳ ಪರಿಸ್ಥಿತಿ ಏನು? 85 ವಿದ್ಯಾರ್ಥಿಗಳು ಪಿಜಿ ಪದವಿ ಮುಗಿಸಿದ್ದರೂ, ಎಂಸಿಎ ಅನುಮತಿ ಕೊಡಲ್ಲ. ಏಳು ವಿಭಾಗದ 14 ಹುದ್ದೆ ತುಂಬಲು ಮಂಜೂರಾತಿ ನೀಡಬೇಕು. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಸರ್ಕಾರ ಹುದ್ದೆಗಳನ್ನ ಭರ್ತಿ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಸರ್ಕಾರದ ಪರವಾಗಿ ಉತ್ತರಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ಹುದ್ದೆ ನೇಮಕವನ್ನು ಆದಷ್ಟು ಶೀಘ್ರವಾಗಿ ಮಾಡುತ್ತೇವೆ. ಅಲ್ಲಿನ ಪರಿಸ್ಥಿತಿಯ ಅರಿವಿದೆ. ನೇಮಕ ಪ್ರಕ್ರಿಯೆ ನಡೆಸುತ್ತೇವೆ ಎಂದರು.