ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗಾಂಧಿನಗರದಲ್ಲಿ ಗಾಂಜಾ ನಶೆ ಚರ್ಚೆ ಜೋರಾಗಿ ನಡೆಯುತ್ತಿದೆ. ಪ್ರಕರಣ ಸಂಬಂಧ ನಟಿ ರಾಗಿಣಿ ಹಾಗೂ ಹಲವರನ್ನ ಈಗಾಗಲೇ ಬಂಧಿಸಲಾಗಿದೆ. ಈ ಮಧ್ಯೆ ಪೊಲೀಸರು ಹಲವಾರು ಗಾಂಜಾ ಆರೋಪಿಗಳನ್ನ ಇಂದು ಅರೆಸ್ಟ್ ಮಾಡಿದ್ದಾರೆ.
ನಗರದ ಪಶ್ಚಿಮ ವಿಭಾಗದ ಪೊಲೀಸರು ಕೂಡ ಬೇಟೆ ಆರಂಭಿಸಿದ್ದು, 12 ಪ್ರಕರಣಗಳಲ್ಲಿ 15 ಜನರನ್ನು ಬಂಧಿಸಿ ಒಟ್ಟು 5.916ಕೆಜಿ ಗಾಂಜಾ, 25,080 ರೂ ನಗದು, ಒಂದು ಕಾರು ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ.
ಸುನಿಲ್ ಕುಮಾರ್(37), ರಘು(27), ನಾಗರಾಜ್(35), ಹಾದ್(27), ರವಿ(19), ಶರೀಫ್(25), ಸಲ್ಮಾನ್(23), ಇಮ್ರಾನ್ (22), ಇಮ್ರಾನ್ ಖಾನ್(26), ಮುನಿಯಾಂಡಿ(22), ಮಂಜುನಾಥ(19), ಜ್ಯೋತಿ(32), ರಾಜೇಶ್ವರಿ (45) ಮತ್ತು ಯಾಜ್ ಶೇಖ್(25) ಬಂಧಿತ ಆರೋಪಿಗಳು.