ಕರ್ನಾಟಕ

karnataka

ETV Bharat / state

ಉತ್ಪಾದನೆ ಕ್ಷೀಣ, ಖರೀದಿಯೂ ಇಲ್ಲ: ಕಾರ್ಮಿಕರ ಕೊರತೆಯಿಂದ ಕಂಗೆಟ್ಟ ಗ್ರಾನೈಟ್​​ ಉದ್ಯಮ - ಗ್ರಾನೈಟ್ ಮಾರ್ಬಲ್ ಉದ್ಯಮದ ಮೇಲೆ ಲಾಕ್​ಡೌನ್​ ಪರಿಣಾಮ

ಕೊರೊನಾ ಲಾಕ್​​ಡೌನ್​ ಪರಿಣಾಮ ಗ್ರಾನೈಟ್ ಮಾರ್ಬಲ್ ಕಲ್ಲುಗಳನ್ನ ತಯಾರಿಸುವ ಮತ್ತು ಮಾರಾಟ ಮಾಡುವ ಉದ್ಯಮ ಕೂಡ ನೆಲಕಚ್ಚಿದ್ದು, ಬೇಡಿಕೆಯಲ್ಲಿ ಇಳಿಕೆ ಸೇರಿದಂತೆ ಕಾರ್ಮಿಕರ ಕೊರತೆಯಿಂದಾಗಿ ಇಡೀ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ.

marble granite industry crisis
ಗ್ರಾನೈಟ್ ಮಾರ್ಬಲ್ ಉದ್ಯಮಕ್ಕೆ ನಷ್ಟ

By

Published : Jun 17, 2020, 3:14 PM IST

ಬೆಂಗಳೂರು: ಲಾಕ್​​ಡೌನ್​ನಿಂದ ಎಲ್ಲ ಉದ್ಯಮಕ್ಕೆ ಪೆಟ್ಟು ಬಿದಿದ್ದು, ಗ್ರಾನೈಟ್ ಮಾರ್ಬಲ್ ಕಲ್ಲುಗಳನ್ನ ಮಾರಾಟ ಮಾಡುವ ಉದ್ಯಮದಾರರು ಕಲ್ಲಿನ ಉತ್ಪಾದನೆ, ಬೇಡಿಕೆ ಇಲ್ಲದಿರುವ ಜೊತೆ ಕಾರ್ಮಿಕರ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದಾರೆ.

ಗ್ರಾನೈಟ್ ಮಾರ್ಬಲ್ ಉದ್ಯಮಕ್ಕೆ ನಷ್ಟ
ಈ ಬಗ್ಗೆ ಗ್ರಾನೈಟ್ ಮಾರ್ಬಲ್ ಹಾಗೂ ಇಂಟೀರಿಯರ್ ಉತ್ಪನ್ನಗಳ ಮಾರಾಟಗಾರ ಸಾಗರ್ ಕೃಷ್ಣ ಮಾತನಾಡಿ, ಕೆಲ ವರ್ಗದ ಜನ ಮನೆ ನಿರ್ಮಾಣಕ್ಕೆ ಗ್ರಾನೈಟ್, ಮಾರ್ಬಲ್ ನಂತ ದುಬಾರಿ ಕಲ್ಲುಗಳನ್ನ ಉಪಯೋಗಿಸುತ್ತಾರೆ. ಹೀಗಾಗಿ ಕೆಲ ಗ್ರಾಹಕರು ಬಂದು ಕಲ್ಲುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆದರೆ ಇವುಗಳನ್ನು ತಯಾರಿಸಲು ಕಾರ್ಮಿಕರೇ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಕೊರೊನಾ ಬಿಕ್ಕಟ್ಟಿನಿಂದಾಗಿ​ ಕಾರ್ಮಿಕರು ಸ್ವಂತ ಊರುಗಳಾದ ರಾಜಸ್ಥಾನ ಹಾಗೂ ಉತ್ತರಪ್ರದೇಶಕ್ಕೆ ತೆರಳಿದ್ದಾರೆ. ಕೆಲಸ ನಡೆಯುತ್ತಿದ್ದರೆ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಆದರೆ ಉತ್ಪಾದನೆ ಇಲ್ಲದ ಕಾರಣ ಬೇಡಿಕೆಯೂ ಹೆಚ್ಚಾಗಿಲ್ಲ, ಇತ್ತ ಬೇಡಿಕೆ ಬಂದರೂ, ಗ್ರಾನೈಟ್ ಮಾರ್ಬಲ್​ಗಳ ಉತ್ಪಾದನೆ ಆಗದ ಕಾರಣ ಪೂರೈಕೆ ಮಾಡಲಾಗದೇ ವ್ಯಾಪಾರದಲ್ಲಿ ಕುಸಿತ ಕಾಣುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು 2010 ರಿಂದ 2015 ರವರೆಗೆ ಬೆಂಗಳೂರು ಸೇರಿದಂತೆ ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಸಿಮೆಂಟ್, ಟೈಲ್ಸ್ ಹಾಗೂ ಇನ್ನಿತರ ಮನೆ ನಿರ್ಮಾಣಕ್ಕೆ ಬೇಕಾದ ವಸ್ತುಗಳ ವ್ಯಾಪಾರ ಉತ್ತಮವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಉದ್ಯಮ ನಿಧಾನಗತಿಯಲ್ಲಿ ಕ್ಷೀಣಿಸುತ್ತ ಬಂದಿತ್ತು. ಕೊರೊನ ಬಳಿಕವಂತೂ ಇಡೀ ಉದ್ಯಮವೇ ಕಂಗೆಟ್ಟಿದೆ.

ABOUT THE AUTHOR

...view details