ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ನಿಯಂತ್ರಿಸಲು ವಿವಿಧ ಖಾಸಗಿ ಸಂಸ್ಥೆಗಳು ಪಾಲಿಕೆಗೆ ಸಹಾಯ ಹಸ್ತ ನೀಡುತ್ತಿವೆ.
ಬಿಬಿಎಂಪಿಗೆ ಆಕ್ಸಿಜನ್ ಪೂರೈಸಲು ಮುಂದೆ ಬಂದ ಹಲವು ಸಂಸ್ಥೆಗಳು - ಆಯುಕ್ತ ಗೌರವ್ ಗುಪ್ತ
ಕೊರೊನಾ ನಿಯಂತ್ರಿಸಲು ಹಲವಾರು ಖಾಸಗಿ ಸಂಸ್ಥೆಗಳು ನೆರವು ನೀಡುತ್ತಿದ್ದು, ಬಿಬಿಎಂಪಿಗೆ ಟಿವಿಎಸ್ ಮೋಟಾರ್ ಕಂಪನಿ ವತಿಯಿಂದ 20 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಹಾಗೂ ಕ್ಸೈಲೆಮ್ ( Xylem) ಸಂಸ್ಥೆ ಯಿಂದ 35 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ನೀಡಿವೆ.
oxygen
ಇಂದು ಟಿವಿಎಸ್ ಮೋಟಾರ್ ಕಂಪನಿ ವತಿಯಿಂದ 20 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಹಾಗೂ ಕ್ಸೈಲೆಮ್ ( Xylem) ಸಂಸ್ಥೆಯಿಂದ 35 ಆಕ್ಸಿಜನ್ ಕಾನ್ಸನ್ಟ್ರೇಟರ್ಸ್ ಗಳನ್ನು ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಹಸ್ತಾಂತರಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ಸಂಸ್ಥೆಗಳು ನೀಡುತ್ತಿರುವ ಆಕ್ಸಿಜನ್ ಕಾನ್ಸನ್ ಟ್ರೇಟರ್ಸ್ ಗಳನ್ನು ಟ್ರಯಾಜ್ ಸೆಂಟರ್ ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಬಳಕೆ ಮಾಡಿ ಆಕ್ಸಿಜನ್ ಸೌಲಭ್ಯ ಬೇಕಿರುವ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.