ಬೆಂಗಳೂರು: ನಗರದಲ್ಲಿ ವಿವಿಧ ವಿದ್ಯುತ್ ಕಾಮಗಾರಿಯ ಹಿನ್ನೆಲೆಯಲ್ಲಿ ಇಂದು(ಗುರುವಾರ) ಬಹುತೇಕ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎನ್.ಜಿ.ಇ.ಎಫ್ ಸ್ಟೇಷನ್ನಲ್ಲಿ ತುರ್ತು ನಿರ್ವಹಣಾ ಕೆಲಸ ಇರುವುದರಿಂದ ನಗರದ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ನಗರದ ಕೆನರಾ ಬ್ಯಾಂಕ್, ಅಜಂತಾ ಟ್ರಿನಿಟಿ ಸರ್ಕಲ್, ಇಂದಿರಾ ನಗರ 1ನೇ ಹಂತ, ಹೆಚ್ಎಎಲ್ 2ನೇ ಹಂತ, ಹಲಸೂರು, ಹಳೇ ಮದ್ರಾಸ್ ರಸ್ತೆಯ ಬೆನ್ನಿಗಾನ ಹಳ್ಳಿ ಎ.ನಾರಾಯಣಪುರ, ಬಿ.ನಾರಾಯಣಪುರ, ಕಗ್ಗದಾಸಪುರ, ಆಕಾಶನಗರ, ಪೈ ಲೇಔಟ್ನಲ್ಲಿಯೂ ವಿದ್ಯುತ್ ವ್ಯತ್ಯಯ ಆಗಲಿದೆ.
ಎಂ.ವಿ.ಬಿ ರೈಲ್ವೆ ನಿಲ್ದಾಣ, ಜೋಗುಪಾಳ್ಯ ಇಲ್ಟೆ ತೊಪ್ಪು, ಕಾರ್ ಸ್ಟ್ರೀಟ್, ಬಜಾರ್ ಸ್ಟ್ರೀಟ್, ಜೋಗುಪಾಳ್ಯ ಮುಖ್ಯ ರಸ್ತೆ, ರಂಕ ಕೋರ್ಟ್, ಅರ್ಟಿಲರಿ ರಸ್ತೆ, ಗೌತಮ ಪುರ, ಕೇಂಬ್ರಿಡ್ಜ್ ರಸ್ತೆ, ಆರ್.ಎಂ.ಝಡ್ ಮಿಲ್ಲೇನಿಯ, ಹಲಸೂರು, ಹಲಸೂರು ರಸ್ತೆ ಭಾಗ, ಗಂಗಪ್ಪ ಲೇಔಟ್, ಬಿಸಿ ಎಸ್ಟೇಟ್ ಸದಾನಂದನಗರ, ಕಸ್ತೂರಿನಗರ, ಕೃಷ್ಣಪಾಳ್ಯ, ಸುದ್ದಗುಂಟೆಪಾಳ್ಯ, ಆರ್ಎಂಜಡ್ ಹಳೇ ಮದ್ರಾಸ್ ರಸ್ತೆ, ನಾಗಾವರಪಾಳ್ಯ ಕುವೆಂಪು ಸ್ಟ್ರೀಟ್, ವಿವೇಕಾನಂದ ಸ್ಟ್ರೀಟ್, ಕೊಂಡಪ್ಪ ರೆಡ್ಡಿ ಲೇಔಟ್, ಅಂಕಪ್ಪ ರೆಡ್ಡಿ ಲೇಔಟ್, ಶಿವ ದೇವಸ್ಥಾನ ರಸ್ತೆ, ಅಯ್ಯಪ್ಪ ದೇವಸ್ಥಾನದ ರಸ್ತೆ, ಏರ್ಪೋರ್ಟ್ ಕ್ವಾರ್ಟ್ರಸ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪವರ್ ಕಟ್ ಆಗಲಿದೆ.
ಹಾಗೆಯೇ, ಉದಯನಗರ, ಬೈರಸಂದ್ರ, ಸಿ.ವಿ.ರಾಮನ್ ನಗರ, ಎನ್ಜಿಇಎಫ್ನ ಪೂರ್ವಭಾಗ, ಸದಾನಂದನಗರ, ಕಸ್ತೂರಿನಗರ, ವರ್ತೂರು ರಸ್ತೆ, ಭುವನೇಶ್ವರಿನಗರ, ನಾಗವಾರ ಪಾಳ್ಯ, ನಾಗಪ್ಪರೆಡ್ಡಿ ಲೇಔಟ್, ಅಬ್ಬಯ್ಯರೆಡ್ಡಿ ಲೇಔಟ್, ಬಾಲಾಜಿ ಲೇಔಟ್, ಧರ್ಮೋಹಲ್ಲಾ, ವಿಜಿನಾಪುರ ಪೈ ಲೇಔಟ್ನಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.
ಇದನ್ನೂ ಓದಿ:ಐಎನ್ಎಸ್ ವಿಕ್ರಮಾದಿತ್ಯದಲ್ಲಿ ಅಗ್ನಿ ಅವಘಡ, ತನಿಖೆಗೆ ಆದೇಶ