ಬೆಂಗಳೂರು: ವಿಜಯನಗರಕ್ಕೆ ಜಿಲ್ಲೆಯ ಮಾನ್ಯತೆಯ ಮನವಿ ಕುರಿತು ನಿಯೋಗದೊಂದಿಗೆ ಸಿಎಂ ಗೃಹ ಕಚೇರಿ ಕೃಷ್ಣಗೆ ಬಂದಿದ್ದ ಕಂಪ್ಲಿ ಮಾಜಿ ಶಾಸಕ ಗಣೇಶ್ ಬಿಜೆಪಿ ಸರ್ಕಾರ ನಮ್ಮ ಅನುದಾನಗಳನ್ನು ಕಡಿತ ಮಾಡಿದೆ. ಈ ಹಿಂದಿನ ಸರ್ಕಾರಗಳು ಹೀಗೆ ಅನುದಾನಗಳನ್ನು ಕಡಿತ ಮಾಡಿಲ್ಲ. ನಮ್ಮ ಕ್ಷೇತ್ರಗಳಿಗೆ ಬಿಡುಗಡೆ ಆಗಿದ್ದ ಅನುದಾನಗಳನ್ನು ನಿಲ್ಲಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನುದಾನ ಸ್ಥಗಿತದಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ: ಕಂಪ್ಲಿ ಗಣೇಶ್ ಆರೋಪ
ಬಿಜೆಪಿ ಸರ್ಕಾರ ನಮ್ಮ ಅನುದಾನಗಳನ್ನು ಕಡಿತ ಮಾಡಿದೆ. ಈ ಹಿಂದಿನ ಸರ್ಕಾರಗಳು ಹೀಗೆ ಅನುದಾನಗಳನ್ನು ಕಡಿತ ಮಾಡಿಲ್ಲ. ನಮ್ಮ ಕ್ಷೇತ್ರಗಳಿಗೆ ಬಿಡುಗಡೆ ಆಗಿದ್ದ ಅನುದಾನಗಳನ್ನು ನಿಲ್ಲಿಸಲಾಗಿದೆ. ವಿಜಯನಗರಕ್ಕೆ ಜಿಲ್ಲೆಯ ಮಾನ್ಯತೆಗೆ ಬಹಳ ದಿನಗಳಿಂದ ಆಗ್ರಹಿಸುತ್ತಿದ್ದೇವೆ. ಇವತ್ತು ಜಗದ್ಗುರುಗಳ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ಇವತ್ತು ಚರ್ಚಿಸಿ ಸಂಜೆಗೆ ನಿರ್ಧಾರ ಹೇಳೋದಾಗಿ ತಿಳಿಸಿದ್ದಾರೆ ಎಂದು ಕಂಪ್ಲಿ ಮಾಜಿ ಶಾಸಕ ಗಣೇಶ್ ಬೇಸರ ವ್ಯಕ್ತಪಡಿಸಿದರು.
ಸಿಎಂ ಯಡಿಯೂರಪ್ಪ ಅವರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯನಗರಕ್ಕೆ ಜಿಲ್ಲೆಯ ಮಾನ್ಯತೆ ನೀಡಬೇಕು ಎಂದು ಬಹಳ ದಿನಗಳಿಂದ ಆಗ್ರಹಿಸುತ್ತಿದ್ದೇವೆ. ಇವತ್ತು ಜಗದ್ಗುರುಗಳ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದೇವೆ. ಮುಖ್ಯಮಂತ್ರಿಗಳು ಇವತ್ತು ಚರ್ಚಿಸಿ ಸಂಜೆಗೆ ನಿರ್ಧಾರ ಹೇಳೋದಾಗಿ ತಿಳಿಸಿದ್ದಾರೆ ಎಂದರು.
ಡಿಕೆಶಿ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು, ಬಿಜೆಪಿಯಲ್ಲೂ ಹಲವು ಶ್ರೀಮಂತರಿದ್ದಾರೆ. ಅವರ ಮೇಲೆ ಯಾಕೆ ದೂರು, ದಾಳಿ ಆಗಲ್ಲ? ಎಂದು ಪ್ರಶ್ನಿಸಿದರು. ಜೊತೆಗೆ ಡಿಕೆಶಿ ಅವರು ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದರೆ ಕಾನೂನು ಹೋರಾಟ ಮಾಡಿಕೊಳ್ಳುತ್ತಾರೆ. ಅದಕ್ಕಾಗಿ ಅವರಿಗೆ ಇಡಿ, ಐಟಿ ಮೂಲಕ ಕಿರುಕುಳ ಕೊಡೋದು ಸರಿಯಲ್ಲ ಎಂದು ಹೇಳಿದರು.