ಬೆಂಗಳೂರು:ಸ್ಮಾರ್ಟ್ಸಿಟಿ ಕಾಮಗಾರಿಯ ಸ್ಥಳದಲ್ಲಿ ದುರ್ನಾತ ಬೀರುತ್ತಿರುವ ಒಳಚರಂಡಿಯಲ್ಲಿ ಕೈಗೆ ಗ್ಲೌಸ್ ಹಾಗೂ ಮಾಸ್ಕ್ ಇಲ್ಲದೇ ಕೈಗಳಿಂದಲೇ ಬಕೆಟ್ ಮೂಲಕ ಶೌಚಾಲಯದ ನೀರನ್ನು ಕಾರ್ಮಿಕರು ಎತ್ತಿಹಾಕುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಾಜಿನಗರದ ಇನ್ಫಾಂಟ್ರಿ ರಸ್ತೆಯ ಒಳಚರಂಡಿ ಬ್ಲಾಕ್ ಆಗಿದೆ ಎಂಬ ದೂರು ಸ್ಮಾರ್ಟ್ಸಿಟಿ ಲಿಮಿಟೆಡ್ಗೆ ಬಂದಿತ್ತು. ಸ್ಮಾರ್ಟ್ಸಿಟಿ ಸಂಸ್ಥೆ ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಬೇಕಿತ್ತು. ಆದರೆ, ಒಬ್ಬ ಕಾರ್ಮಿಕ ಹಾಗೂ ಮತ್ತೊಬ್ಬ ವೃದ್ಧರನ್ನು ಬಳಸಿಕೊಂಡು ಯಾವುದೇ ಸುರಕ್ಷತಾ ಮಾರ್ಗಗಳಿಲ್ಲದೇ ಅತ್ಯಂತ ಕನಿಷ್ಠವಾಗಿ ನಡೆಸಿಕೊಂಡಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.