ಬೆಂಗಳೂರು:ಕೆರೆ ಹಾಗೂ ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಆರೋಪದ ಹಿನ್ನೆಲೆ ಮಂತ್ರಿಮಾಲ್ ವಾಣಿಜ್ಯ ಕಟ್ಟಡ ಹಾಗೂ ಮಂತ್ರಿಗ್ರೀನ್ ಅಪಾರ್ಟ್ಮೆಂಟ್ ಸರ್ವೆ ಕಾರ್ಯ ಆರಂಭವಾಗಿದೆ. ಸರ್ವೆ ಮೇಲ್ವಿಚಾರಕ ಸಿ.ಬಿ. ಗಂಗಯ್ಯ ನೇತೃತ್ವದಲ್ಲಿ ಸರ್ವೆ ಕಾರ್ಯ ಆರಂಭವಾಗಿದ್ದು, ಮಾಧ್ಯಮಗಳಿಗೆ ಪ್ರವೇಶ ದ್ವಾರದಲ್ಲೇ ಸಿಬ್ಬಂದಿ ತಡೆದರು.
ಇನ್ನು ಮಂತ್ರಿ ಗ್ರೀನ್ಸ್ ಓನರ್ ಅಶೋಶಿಯೇಸನ್ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಮಾತನಾಡಿ, 18 ಎಕರೆ ಜಾಗವನ್ನು ಸಾರ್ವಜನಿಕ ಹರಾಜಿನ ಮೂಲಕ ಖರೀದಿ ಮಾಡಿಸಲಾಗಿದೆ. ಸರ್ಕಾರದಿಂದ ಜಾಗ ಖರೀದಿ ಮಾಡಿ ಸೇಫ್ ಅಂತ ಖರೀದಿಸಿದ್ದೆವು. ಈಗ ಗ್ರಾಮಾಂತರ ರಸ್ತೆ ಅಂತಾರೆ ಆ ರಸ್ತೆಯ ಪ್ರಸ್ತಾಪವೇ ಇಲ್ಲ. 13 ಎಕರೆ ಮಹಾರಾಜರು ಕೊಟ್ಟ ಜಾಗ 5 ಎಕರೆ ರಸ್ತೆ ಜಾಗ, ಸರ್ಕಾರದಿಂದ ಖರೀದಿ ಮಾಡಿದ ಜಾಗವಿದು ಹೀಗಾಗಿ ಯಾವುದೇ ವ್ಯಾಜ್ಯವಿಲ್ಲ ಎಂದರು.
ಹರ್ಷ ಗುಪ್ತ ಅವರ ಆದೇಶದಂತೆ, 5 ಎಕರೆ ಜಾಗ ಹಮಾರಾ ಶೆಲ್ಟರ್ ದಾಖಲೆ ನೀಡಬೇಕೆಂದು ಆದೇಶ ಹೇಳಿದೆ. 420 ಜನ ನಿವೃತ್ತರು ಖರೀದಿ ಮಾಡಿರೋ ಜಾಗಕ್ಕೆ ಈಗ ತೊಂದರೆಯಾಗಿದೆ. ಪ್ರಾದೇಶಿಕ ಆದೇಶದ ಪ್ರಕಾರ ಸರ್ವೇ ಮಾಡಲು ಸೂಚನೆ ಕೊಡಲಾಗಿದೆ. ಆದರೆ ಸ್ಟೇ ಇದೆ ಈಗ ಸಮಸ್ಯೆ ಎದುರಾದರೆ ಬಿಬಿಎಂಪಿಯ ಮುಂದೆ ಹೋಗಿ ಧರಣಿ ಕೂರುತ್ತೇವೆ ಎಂದರು. ಬಿಬಿಎಂಪಿ ಅನುಮತಿ ನೀಡಿರೋ ನಕ್ಷೆ ಪ್ರಕಾರ ಈ ಜಾಗ ನಮ್ಮದು ಎಂದು ತಿಳಿಸಿದ್ರು.
ಮಂತ್ರಿಮಾಲ್ ಒತ್ತುವರಿ ಸರ್ವೆ ಕಾರ್ಯ ಆರಂಭ ಇನ್ನು ಸರ್ವೆ ಅಧಿಕಾರಿಗಳಿಗೆ ಹೈಕೋರ್ಟ್ ಸ್ಟೇ ತೋರಿಸಿದ ಮಂತ್ರಿ ಗ್ರೀನ್ಸ್ ಸಿಬ್ಬಂದಿ, ಒಳಭಾಗದಲ್ಲಿ ಸರ್ವೆ ನಡೆಸದಂತೆ ತಡೆದರು. ಹೀಗಾಗಿ ಕಾಂಪೌಂಡ್ ಹೊರಬಾಗದಿಂದ ಸರ್ವೆ ಕಾರ್ಯ ಮಾಡಲಾಯಿತು. ಈ ಬಗ್ಗೆ ಮಾತನಾಡಿದ ಸರ್ವೆ ಅಧಿಕಾರಿ ಸಿ.ಬಿ. ಗಂಗಯ್ಯ ಸ್ಟೇ ಕುರಿತು ಪರೀಶೀಲನೆ ನಡೆಸಲಾಗುವುದು ಹಾಗೂ ಬಳಿಕ ಒಳಭಾಗದಲ್ಲಿ ಸರ್ವೆ ನಡೆಸಲಾಗುವುದು ಎಂದು ತಿಳಿಸಿದರು.