ಕರ್ನಾಟಕ

karnataka

ETV Bharat / state

₹39 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿ ಮಾಲ್: ಬೀಗ ಹಾಕಿ, ತೆರೆದು ಬಿಬಿಎಂಪಿ ಪ್ರಹಸನ

39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್​​ಗೆ ಬೀಗ ಜಡಿದಿದ್ದ ಬಿಬಿಎಂಪಿ, 5 ಕೋಟಿ ರೂ ಡಿಡಿ ಪಾವತಿ ಮಾಡಿದ ಕೂಡಲೇ ಬೀಗ ತೆರೆಯಲು ಅವಕಾಶ ನೀಡಿದೆ.

mantri mall to pay 39 crore tax dues
ಮಂತ್ರಿ ಮಾಲ್

By

Published : Sep 30, 2021, 3:06 PM IST

ಬೆಂಗಳೂರು:ಬಾಕಿ ಉಳಿಸಿಕೊಂಡ ಕಂದಾಯ ವಸೂಲಿ ಕಾರ್ಯಕ್ರಮದ ಭಾಗವಾಗಿ, ಬಿಬಿಎಂಪಿ ಪಶ್ಚಿಮ ವಲಯ ಕಚೇರಿಯು ಬರೋಬ್ಬರಿ 39 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಡ ಮಂತ್ರಿ ಮಾಲ್​​ಗೆ ಬೀಗ ಜಡಿದಿದೆ.

ಮಂತ್ರಿಮಾಲ್​​ಗೆ ಬೀಗ ಹಾಕಿದ ಬಿಬಿಎಂಪಿ ಅಧಿಕಾರಿಗಳು

ಆದರೆ ಕೇವಲ 5 ಕೋಟಿ ರೂ ಡಿಡಿ ಪಾವತಿ ಮಾಡಿದ ಕೂಡಲೇ ಬೀಗ ತೆರೆಯಲು ಅವಕಾಶ ಕೊಟ್ಟಿದೆ. ಬಿಬಿಎಂಪಿಯ ಈ ನಡೆ ಸಾರ್ವಜನಿಕರ ಟೀಕೆಗೆ ಒಳಗಾಗಿದೆ. ಪಾಲಿಕೆಯು ಬಡವರಿಗೊಂದು ನಿಯಮ, ಶ್ರೀಮಂತರಿಗೊಂದು ನಿಯಮ ಮಾಡುತ್ತಿದೆ. 2017 ರಿಂದಲೂ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಬಡ್ಡಿ ಹಣವೂ ಸೇರಿ 39 ಕೋಟಿ ರೂ ಬಾಕಿಯಾಗಿದೆ.

5 ಕೋಟಿ ರೂ ಡಿಡಿ ಪಾವತಿ

ಹಲವು ಬಾರಿ ನೋಟಿಸ್​ ನೀಡಿದರೂ ಕ್ಯಾರೆನ್ನದ ಮಂತ್ರಿ ಮಾಲ್ ಆಡಳಿತ ವರ್ಗಕ್ಕೆ ಈ ಹಿಂದೆಯೂ ಬೀಗ ಹಾಕಿ ಬಿಸಿ ಮುಟ್ಟಿಸಲಾಗಿತ್ತು. ತೆರಿಗೆ ಕಟ್ಟುವುದಾಗಿ ಮುಚ್ಚಳಿಕೆ ಬರೆದುಕೊಟ್ಟ ಬಳಿಕ ತೆರೆಯಲು ಅನುಮತಿಸಿದ್ದರು‌. ಇಂದು ಮತ್ತೆ ತೆರಿಗೆ ಸಂಗ್ರಹ ಅಭಿಯಾನದ ಭಾಗವಾಗಿ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಹಾಗೂ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್​ಗೆ ಬೀಗ ಹಾಕಿ, ಸ್ವಲ್ಪ ತೆರಿಗೆ ಪಾವತಿಸಿದ ಬಳಿಕ ತೆರೆಯಲು ಅವಕಾಶ ಕೊಟ್ಟರು.

2018ರಿಂದ ತೆರಿಗೆ ಪಾವತಿಸಿಲ್ಲ:

2018ರಿಂದ ಮಂತ್ರಿ ಮಾಲ್​ನಿಂದ ಆಸ್ತಿ ತೆರಿಗೆ ಪಾವತಿ ಆಗಿಲ್ಲ. ಪ್ರತಿ ವರ್ಷ ಮಂತ್ರಿ ಮಾಲ್ 6.77 ಲಕ್ಷ ರೂ ಆಸ್ತಿ ತೆರಿಗೆ ಪಾವತಿಸಬೇಕು. ಒಟ್ಟು ಮಾಲ್​​ನಿಂದ ಬಿಬಿಎಂಪಿಗೆ 39 ಕೋಟಿ ರೂ ಪಾವತಿ ಆಗಬೇಕು. ಮಂತ್ರಿ ಮಾಲ್ ಸಿಇಒ ನಿತಿನ್ ಗುಪ್ತಾ 5 ಕೋಟಿ ರೂ ಡಿಡಿ ಕೊಟ್ಟ ಕಾರಣ ಮಾಲ್ ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಶಿವಸ್ವಾಮಿ ತಿಳಿಸಿದರು.

ಇದನ್ನೂ ಓದಿ:ಡೆತ್​ನೋಟ್​ ಬರೆದಿಟ್ಟು ನಟಿ ಸೌಜನ್ಯ ಆತ್ಮಹತ್ಯೆ

ABOUT THE AUTHOR

...view details