ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದ ಇಡಿ ವಶದಲ್ಲಿರುವ ಮನ್ಸೂರ್ ಅಲಿ ಖಾನ್ ರಾತ್ರಿ ಪೂರ್ತಿ ಆರಾಮಾಗಿ ನಿದ್ದೆ ಮಾಡಿ, ಬೆಳಗ್ಗೆ 7ಕ್ಕೆ ಎದ್ದು, ಇಡಿ ವಿಚಾರಣೆಗೆ ಸಜ್ಜಾಗಿದ್ದಾನೆ.
ರಾತ್ರಿ ಹಾಯಾಗಿ ನಿದ್ದೆ ಮಾಡಿದ ಮನ್ಸೂರ್: ಇಡಿ ವಿಚಾರಣೆಗೆ ಸಜ್ಜಾದ 'ಟೋಪಿವಾಲ' - undefined
ಇಡಿ ವಶದಲ್ಲಿರುವ ಮನ್ಸೂರ್ ರಾತ್ರಿಯಿಡೀ ಕಚೇಯಲ್ಲಿ ಹಾಯಾಗಿ ನಿದ್ದೆ ಮಾಡಿದ್ದಾನೆ. ಬೆಳಗ್ಗೆ ಏಳಕ್ಕೆ ಎದ್ದು ವಿಚಾರಣೆಗೆ ಸಿದ್ಧನಾಗಿದ್ದು, ಇನ್ನು ಕೆಲವೇ ಹೊತ್ತಿನಲ್ಲಿ ವಿಚಾರಣೆ ಆರಂಭವಾಗಲಿದೆ.
ಮನ್ಸೂರ್
ಬೆಳಗ್ಗೆ ಪೇಪರ್ ಓದಿ ಇಡಿ ವಿಚಾರಣೆಗೆ ರೆಡಿಯಾಗಿರುವ ಮನ್ಸೂರ್, ಇಡಿ ಕಚೇರಿ ಆವರಣದಲ್ಲಿ ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಇಡಿ ಕಚೇರಿ ಸುತ್ತ ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಇನ್ನು ಕೆಲ ಹೊತ್ತಿನಲ್ಲೇ ಆರೋಪಿಯ ವಿಚಾರಣೆಯನ್ನು ವಿಡಿಯೋ ಮೂಲಕ ಅಧಿಕಾರಿಗಳು ದಾಖಲಿಕೊಳ್ಳಲಿದ್ದಾರೆ. ಹಾಗೆ ಆರೋಪಿ ಮನ್ಸೂರ್‌ನನ್ನು ಇಂದು ಮತ್ತೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ಸಾಧ್ಯತೆ ಕೂಡ ಇದೆ.