ಐಎಂಎ ಬಹುಕೋಟಿ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಖಾನ್ ಮತ್ತೆ ಸಿಬಿಐ ವಶಕ್ಕೆ - ನಿಜಾಮುದ್ದೀನ್ ಮತ್ತು ನಾಸೀರ್ ಹುಸೇನ್
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮತ್ತೆ ಸಿಬಿಐ ವಶವಾಗಿದ್ದಾರೆ. ಸೆಪ್ಟೆಂಬರ್ 24 ರವರೆಗೆ ಸಿಬಿಐ ಗೆ ಒಪ್ಪಿಸಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮತ್ತೆ ಸಿಬಿಐ ವಶವಾಗಿದ್ದಾರೆ. ಸೆಪ್ಟೆಂಬರ್ 24 ರವರೆಗೆ ಸಿಬಿಐ ಗೆ ಒಪ್ಪಿಸಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಿಬಿಐ ವಶದಲ್ಲಿದ್ದ ಮನ್ಸೂರ್ ಹಾಗೂ ಆತನ ಆಪ್ತರ ಕಸ್ಟಡಿ ಇಂದು ಅಂತ್ಯವಾದ ಹಿನ್ನೆಲೆ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಸಿಬಿಐ ಪರ ವಕೀಲ ಸುದರ್ಶನ್ ಆರೋಪಿಗಳ ವಿಚಾರಣೆ ಮತ್ತಷ್ಟು ಅಗತ್ಯವಿದೆ. ವಂಚನೆ ಮತ್ತು ಹಣ ನೀಡಿರುವ ಬಗ್ಗೆ ಹಲವು ಮಹತ್ವದ ದಾಖಲೆಗಳನ್ನ ಕಲೆ ಹಾಕಬೇಕಿದೆ. ಆದ್ರಿಂದ ಹೆಚ್ಚಿನ ವಿಚಾರಣೆ ಸಲುವಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ರು.
ಹೀಗಾಗಿ ನ್ಯಾಯಾಲಯ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಮತ್ತು ಎ5 ನವೀದ್ ರನ್ನು ಸೆಪ್ಟೆಂಬರ್ 24 ರ ತನಕ ಸಿಬಿಐ ವಶಕ್ಕೆ ನೀಡಿದೆ. ಹಾಗೆ ಇನ್ನುಳಿದ ನಿಜಾಮುದ್ದೀನ್ ಮತ್ತು ನಾಸೀರ್ ಹುಸೇನ್ ಗೆ ಅಕ್ಟೋಬರ್ 5ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.