ಬೆಂಗಳೂರು: ಯುದ್ಧ ಪೀಡಿತ ಉಕ್ರೇನ್ನಿಂದ ಈವರೆಗೆ 47 ಬ್ಯಾಚ್ಗಳಲ್ಲಿ ಕರ್ನಾಟಕಕ್ಕೆ 448 ವಿದ್ಯಾರ್ಥಿಗಳು ಬಂದಿದ್ದಾರೆ. 40 ಬ್ಯಾಚ್ ದೆಹಲಿಯಿಂದ, 7 ಬ್ಯಾಚ್ ಮುಂಬೈನಿಂದ ಬಂದಿದ್ದಾರೆ ಎಂದು ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದರು.
ನೋಡಲ್ ಅಧಿಕಾರಿ ಮನೋಜ್ ರಾಜನ್ ಎರಡು ಕಡೆ ಕರ್ನಾಟಕದ ಹೆಲ್ಪ್ ಡೆಸ್ಕ್ ಇದ್ದು, ವಿದ್ಯಾರ್ಥಿಗಳು ಲ್ಯಾಂಡ್ ಆದ ಕೂಡಲೇ ಮಾಹಿತಿ ಪಡೆದು ಟಿಕೆಟ್ ಬುಕ್ ಮಾಡಿ ಹತ್ತುವ ತನಕ ಅವರೊಂದಿಗೆ ನಮ್ಮ ಸಿಬ್ಬಂದಿ ಇರುತ್ತಾರೆ. ನಿನ್ನೆ(ಶನಿವಾರ) ಬೆಳಗಿನ ಜಾವದಿಂದ ರಾತ್ರಿ ತನಕ 12 ವಿಮಾನಗಳು ಬಂದಿದ್ದು, ಇದರಲ್ಲಿ 76 ಜನ ಕನ್ನಡಿಗರು ಇಂದು ದೆಹಲಿಗೆ ಬಂದಿದ್ದಾರೆ.
ನಾಳೆ(ಸೋಮವಾರ) 9 ವಿಮಾನಗಳು ಬರುತ್ತಿದ್ದು, ಅದರಲ್ಲಿ ಎಷ್ಟು ಜನ ಬರ್ತಾರೆ ಎಂಬುದನ್ನು ನೋಡಬೇಕು. ಕಂಟ್ರೋಲ್ ರೂಂ ಮಾಹಿತಿ ಪ್ರಕಾರ ಇನ್ನೂ 236 ಜನ ಕನ್ನಡಿಗರು ವಾಪಸ್ ಬರಬೇಕಿದೆ ಎಂದು ಅವರು ತಿಳಿಸಿದರು.
ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ಮೃತದೇಹ ತರುವ ವಿಚಾರವಾಗಿ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿ, ಸರ್ಕಾರದಿಂದ ಎಲ್ಲಾ ಪ್ರಯತ್ನ ನಡೆಯುತ್ತಿದೆ. ಸಿಎಂ ಬೊಮ್ಮಾಯಿ ಈ ಬಗ್ಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ಉಕ್ರೇನ್ ಯುದ್ಧಭೂಮಿಗೆ 3 ಸಾವಿರಕ್ಕೂ ಹೆಚ್ಚು ಅಮೆರಿಕದ 'ಸ್ವಯಂಸೇವಕ'ರ ಆಗಮನ!