ಬೆಂಗಳೂರು: ಮಂಜುನಾಥ್ ಪ್ರಸಾದ್ ಅವರಿಗೆ ಮತ್ತೆ ಬಿಬಿಎಂಪಿ ವ್ಯಾಪ್ತಿಯ ಕೋವಿಡ್ ನಿರ್ವಹಣೆ ಜವಾಬ್ದಾರಿ ಕೊಡಲಾಗಿದೆ.
ಮಂಜುನಾಥ್ ಪ್ರಸಾದ್ ಅವರಿಗೆ ಮತ್ತೆ ಬಿಬಿಎಂಪಿ ಕೋವಿಡ್ ನಿರ್ವಹಣೆ ಹೊಣೆ - bangalore news
ಹಿರಿಯ ಐಎಎಸ್ ಅಧಿಕಾರಿ ಹಾಗೂ ಮೂರು ಬಾರಿ ಪಾಲಿಕೆಯ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರಿಗೆ ಕೋವಿಡ್ ನಿರ್ವಹಣೆ ಜವಾಬ್ದಾರಿ ಕೊಡಲಾಗಿದೆ.
ಮಂಜುನಾಥ್ ಪ್ರಸಾದ್ ಅವರಿಗೆ ಮತ್ತೆ ಬಿಬಿಎಂಪಿ ಕೋವಿಡ್ ನಿರ್ವಹಣೆ ಹೊಣೆ
ಇತ್ತೀಚೆಗಷ್ಟೇ ಬಿಬಿಎಂಪಿ ಆಯುಕ್ತರ ಹುದ್ದೆಯಿಂದ ವರ್ಗಾವಣೆಗೊಂಡಿದ್ದ, ಹಿರಿಯ ಐಎಎಸ್ ಅಧಿಕಾರಿ ಹಾಗೂ ಮೂರು ಬಾರಿ ಪಾಲಿಕೆಯ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರಿಗೆ ಕೋವಿಡ್ ನಿರ್ವಹಣೆ ಜವಾಬ್ದಾರಿ ಕೊಡಲಾಗಿದೆ.
ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಕಂದಾಯ ಇಲಾಖೆಯ ಪ್ರದಾನ ಕಾರ್ಯದರ್ಶಿಯಾಗಿರುವ ಮಂಜುನಾಥ್ ಪ್ರಸಾದ್, ತಮ್ಮ ಹಾಲಿ ಕರ್ತವ್ಯದ ಜೊತೆಗೆ ಕೋವಿಡ್ ಸಂಬಂಧಿತ ಕರ್ತವ್ಯಗಳ ನಿರ್ವಹಣೆಗೆ ಬಿಬಿಎಂಪಿಯ ಮುಖ್ಯ ಆಯುಕ್ತರಾಗಿರುವ ಗೌರವ್ ಗುಪ್ತಾ ಅವರಿಗೆ ನೆರವು ಒದಗಿಸುವ ಕಾರ್ಯನಿರ್ವಹಿಸುವಂತೆ ಆದೇಶಿಸಿದೆ.