ಬೆಂಗಳೂರು: ಡುಯೆಟ್ ಪಬ್ ಮಾಲೀಕ ಮನೀಶ್ ಶೆಟ್ಟಿ ಮರ್ಡರ್ ಮಿಸ್ಟರಿಯನ್ನು ಆರೋಪಿಗಳು ರಿವೀಲ್ ಮಾಡಿದ್ದಾರೆ. ಮನೀಶ್ ಕೊಲೆಗೂ ಮುನ್ನ ಆರೋಪಿಗಳು ಹಲವು ಕೊಲೆ ಕೇಸ್ ಸ್ಟಡಿ ಮಾಡಿರುವ ವಿಚಾರವನ್ನು ತನೀಕಾಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ.
ಫೈರಿಂಗ್ ಮಾಡಿದ್ರೆ ಕೆಲವೊಮ್ಮೆ ಎದುರಾಳಿ ಸಾಯೋದು ಅನುಮಾನ ಎಂದು ಅರಿತಿದ್ದ ಆರೋಪಿಗಳು, ಗನ್ನಿಂದ ತಲೆಗೆ, ಎದೆಗೆ ಶೂಟ್ ಮಾಡಿದ್ರೆ ಮಾತ್ರ ಸಾಯುತ್ತಾರೆ ಎನ್ನುವ ವಿಚಾರವನ್ನು ಸ್ಟಡಿ ಮಾಡಿದ್ದರು. ಗನ್ನಿಂದ ಶೂಟ್ ಮಾಡಿದ್ರೆ ಎದುರಾಳಿ ಕುಸಿದು ಬೀಳ್ತಾನೆ, ತದನಂತರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುವ ಬಗ್ಗೆ ಮೊದಲೇ ಸ್ಕೆಚ್ ಹಾಕಿದ್ದರು ಎಂದು ಹೇಳಲಾಗ್ತಿದೆ.
ಹೀಗಾಗಿ ಇದಕ್ಕೆ ಪರವಾನಿಗೆಯಿದ್ದ ಸಿಂಗಲ್ ಬ್ಯಾರಲ್ ಗನ್ ಪಡೆದಿರುವ ವಿಚಾರ ಬಯಲಾಗಿದೆ. ಮನೀಶ್ ಶೆಟ್ಟಿ ಮೇಲೆ ಫೈರಿಂಗ್ ಮಾಡಲು ಬಳಸಿದ್ದ ಗನ್ಗೆ ಲೈಸೆನ್ಸ್ ಇತ್ತು. ಆದರೆ ಫೈರಿಂಗ್ನಲ್ಲಿ ಎಕ್ಸ್ಪರ್ಟ್ಗಳಲ್ಲದ ಕಾರಣ ಒಂದು ಗುಂಡು ಹಾರಿಸಿ ಬಳಿಕ ಮಚ್ಚಿನಿಂದಲೇ ಮನೀಶ್ ಶೆಟ್ಟಿ ಕೊಚ್ಚಿ ಕೊಂದಿದ್ದಾಗಿ ಹೇಳಿದ್ದಾರೆ. ಇನ್ನು ಪೊಲೀಸರ ತನಿಖೆ ವೇಳೆ, ಕಡಬಗೆರೆ ರೌಡಿಶೀಟರ್ ಶ್ರೀನಿವಾಸ್ ಮೇಲೆ 2017ರ ಫೆಬ್ರವರಿಯಲ್ಲಿ ನಡೆದಿದ್ದ ಫೈರಿಂಗ್ ಕೇಸ್ ಜೊತೆಗೆ ಹಲವು ಫೈರಿಂಗ್ ಕೇಸ್ಗಳನ್ನು ಸ್ಟಡಿ ಮಾಡಿದ್ದರು ಎಂದು ಬಾಯ್ಬಿಟ್ಟಿದ್ದಾರೆ. ಯಲಹಂಕದ ಕೊಗಿಲು ಕ್ರಾಸ್ನಲ್ಲಿ ಒಟ್ಟು 6 ರೌಂಡ್ ಫೈಯರ್ ಮಾಡಿದ್ದ ದುಷ್ಕರ್ಮಿಗಳು, ಎರಡು ಬುಲೆಟ್ ಶ್ರೀನಿವಾಸ್ ದೇಹಕ್ಕೆ ಹೊಕ್ಕಿಯೂ ಕೂಡ ಅವರು ಬದುಕುಳಿದಿದ್ರು. ಇಂಥಹ ಹಲವು ಕೇಸ್ ಸ್ಟಡಿ ಮಾಡಿ, ಇದೇ ಕಾರಣಕ್ಕೆ ಬಂದೂಕಿನಿಂದ ಶೂಟ್ ಮಾಡಿದ ತಕ್ಷಣ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿರುವ ಸಂಗತಿಯನ್ನು ಹೊರಹಾಕಿದ್ದಾರೆ ಎನ್ನಲಾಗ್ತಿದೆ.