ಕರ್ನಾಟಕ

karnataka

ETV Bharat / state

ಇದು ಹೇಡಿ ಸರ್ಕಾರವಲ್ಲ, ರಾಜಾಹುಲಿ ಸರ್ಕಾರ: ಸುನೀಲ್​​ ಕುಮಾರ್​​​​​ ಗುಡುಗು - vidhanasbe asembly

ವಿಧಾನಸಭೆಯಲ್ಲಿ ಇಂದು ಮಂಗಳೂರು ಗೋಲಿಬಾರ್ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು. ಈ ವೇಳೆ ವಿಷಯ ಪ್ರಸ್ತಾಪಿಸಿ ಮಾತನಾಡಿದ ವಿಧಾನಸಭೆ ಮುಖ್ಯ ಸಚೇತಕ ಸುನಿಲ್ ಕುಮಾರ್, ಇದು ಹೇಡಿ ಸರ್ಕಾರವಲ್ಲ, ರಾಜಾಹುಲಿ ಸರ್ಕಾರ ಎಂದು ಸರ್ಕಾರದ ನಿಲುವುಗಳನ್ನು ಸಮರ್ಥಿಸಿಕೊಂಡರು.

‘Mangalore Golibar debate in Assembly
ವಿಧಾನಸಭೆ ಮುಖ್ಯಸಚೇತಕ ಸುನೀಲ್ ಕುಮಾರ್

By

Published : Feb 19, 2020, 6:24 PM IST

ಬೆಂಗಳೂರು: ಪೊಲೀಸರ ಮೇಲೆ ಕಲ್ಲು ತೂರಾಟ, ಗಲಭೆ ಮಾಡಿದವರನ್ನು ಸುಮ್ಮನೆ ಬಿಡಲ್ಲ. ಇದು ಹೇಡಿ ಸರ್ಕಾರವಲ್ಲ, ರಾಜಾಹುಲಿ ಸರ್ಕಾರ ಎಂದು ವಿಧಾನಸಭೆ ಮುಖ್ಯ ಸಚೇತಕ ಸುನೀಲ್‌ ಕುಮಾರ್ ಗುಡುಗಿದರು.

ಕಾನೂನು ಸುವ್ಯವಸ್ಥೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಖಾದರ್ ಹೇಳಿಕೆಯಿಂದಲೇ ಈ ಗಲಭೆಯಾಗಿದೆ. ಅವರ ಪ್ರಚೋದನಕಾರಿ ಹೇಳಿಕೆಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಗಲಭೆಯಾಗಿದೆ. ಪೊಲೀಸರ ಕ್ರಮವನ್ನು ನಾನು ಸಮರ್ಥಿಸಿಕೊಳ್ಳುತ್ತೇನೆ. ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಹಾಕಿದವರ ವಿರುದ್ಧ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದರು.

ವಿಧಾನಸಭೆ ಮುಖ್ಯ ಸಚೇತಕ ಸುನೀಲ್ ಕುಮಾರ್

ಈ ಗಲಭೆಯಲ್ಲಿ ಭಾರಿ ಅನಾಹುತ ತಪ್ಪಿಸಿದ ಪೊಲೀಸರಿಗೆ ಮುಖ್ಯಮಂತ್ರಿಯವರು ಬಹುಮಾನ ಘೋಷಿಸಬೇಕು. ಪ್ರತಿಭಟನೆಗೆ ಪ್ರಚೋದಿಸಿದ ಯು.ಟಿ.ಖಾದರ್ ಮತ್ತು ಅವರ ಗುಂಪಿನ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಪಿಎಫ್​​ಐ ಸಂಘಟನೆಗಳ ವಿರುದ್ಧ ಹೇಳಿಕೆ ಕೊಟ್ಟರೆ ನಮಗೆ ಸೌದಿಯಿಂದ ಬೆದರಿಕೆ ಕರೆ ಬರುತ್ತದೆ ಎಂದರು.

ಗೋಲಿಬಾರ್​​ನಲ್ಲಿ ಮೃತನಾದ ಜಲೀಲ್ ಎಂಬ ವ್ಯಕ್ತಿಯ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಈ ಮುಂಚೆ ಮೊಕದ್ದಮೆ ದಾಖಲಾಗಿದೆ. ಆದರೆ ನೀವು ಅವನನ್ನು ಅಮಾಯಕ ಎಂದು ಹೇಳುತ್ತೀರಾ. ಪಿಎಫ್​ಐ ಅಶಾಂತಿ ಉಂಟು ಮಾಡಲು ಮುಂದಾಗಿದೆ. ಮೈಸೂರು, ಬೆಳಗಾವಿಯ ಘಟನೆಗಳಲ್ಲಿ ಪಿಎಫ್​ಐ ಪಾತ್ರ ಇತ್ತು. ಇದನ್ನು ಯಾರೂ ಪ್ರಶ್ನೆ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು. ಪೊಲೀಸ್ ಠಾಣೆಯ ನಾಲ್ಕು ದಿಕ್ಕುಗಳಿಂದ ಸುತ್ತುವರಿದರೆ ಅವರು ಅಮಾಯಕರಾ? ಪೆಟ್ರೋಲ್ ಬಾಂಬ್ ಎಸೆಯುವವರು ಅಮಾಯಕರಾ? ಈ ಗಲಭೆಗೆ ಪಿಎಫ್​ಐ ಕಾರಣ‌. ನಾವು ಅವರನ್ನು ಮಟ್ಟ ಹಾಕೋಕೆ ಹೊರಟಿದ್ದೇವೆ. ಆದರೆ ಕಾಂಗ್ರೆಸ್​ನವರು ಅವರನ್ನು ಬೆಂಬಲಿಸುತ್ತಿದ್ದೀರಿ ಎಂದು ಆರೋಪಿಸಿದರು.

ABOUT THE AUTHOR

...view details