ಬೆಂಗಳೂರು :ಒಂದು ಕಾಲದಲ್ಲಿ ಭೂಗತ ಲೋಕವನ್ನು ಲೀಡ್ ಮಾಡುತ್ತಿದ್ದ ಪಾತಕಿಗಳನ್ನೆಲ್ಲ ಪೊಲೀಸರು ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಛೋಟಾ ರಾಜನ್, ಬನ್ನಂಜೆ ರಾಜನ್ ಬಲಗೈ ಬಂಟನಾಗಿದ್ದ ಸುರೇಶ್ ಪೂಜಾರಿಯನ್ನು ಇಂಟರ್ ಪೋಲ್ ಪೊಲೀಸರು ಫಿಲಿಪೈನ್ಸ್ನಲ್ಲಿ ಬಂಧಿಸಿದ್ದಾರೆ.
ಹಲವಾರು ವರ್ಷಗಳ ಹಿಂದೆ ಮಂಗಳೂರು ಮೂಲದ ಸುರೇಶ್ ಪೂಜಾರಿ ಬಾಂಬೆ ಭೂಗತ ಜಗತ್ತಿಗೆ ಕಾಲಿಟ್ಟಿದ್ದ. ಹೀಗೆ ಮುಂಬೈಗೆ ಹೊರಟವನು ಮೊದಲಿಗೆ ಛೋಟಾ ರಾಜನ್ ಬಳಿ ಶಿಷ್ಯನಾಗಿ ಸೇರಿಕೊಂಡ. ಆಗ ಛೋಟಾ ರಾಜನ್ಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ.
1992ರ ಮುಂಬೈ ಬಾಂಬ್ ಸರಣಿ ಸ್ಫೋಟದ ನಂತರ ಬಾಂಬೆ ಡಾನ್ಗಳೆಲ್ಲ ವಿದೇಶಕ್ಕೆ ಶಿಫ್ಟ್ ಆದ್ರು. ಆಗಲೂ ಇವನು ಛೋಟಾ ರಾಜನ್ ಜತೆಯಲ್ಲೇ ಕೆಲಸ ಮಾಡ್ತಿದ್ದ. 2003ರಲ್ಲಿ ರವಿ ಪೂಜಾರಿ ಗ್ಯಾಂಗ್ ಸೇರಿದ ಸುರೇಶ್ ಪೂಜಾರಿ ದೇಶವನ್ನ ಬಿಟ್ಟು ವಿದೇಶಕ್ಕೆ ಹಾರಿದ.