ಕರ್ನಾಟಕ

karnataka

ETV Bharat / state

ಮಂಡ್ಯದ ಮೈ‌ ಶುಗರ್ ಕಾರ್ಖಾನೆಯನ್ನ ಪಿಪಿಪಿ ಮಾದರಿಯಲ್ಲಿ 40 ವರ್ಷ ಲೀಸ್​ಗೆ ನೀಡಲಾಗುತ್ತೆ: ಹೆಬ್ಬಾರ್​ - ವಿಧಾನ ಪರಿಷತ್ ಕಲಾಪ

ಪಾಂಡವಪುರ ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆ ರೀತಿಯಲ್ಲಿಯೇ ಮಂಡ್ಯದ ಮೈ‌ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪಿಪಿಪಿ ಮಾದರಿಯಲ್ಲಿ 40 ವರ್ಷ ಲೀಸ್​​ಗೆ ನೀಡಲಾಗುತ್ತೆ ಎಂದು ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

shivaram-hebbar
ಶಿವರಾಮ್‌ ಹೆಬ್ಬಾರ್

By

Published : Mar 6, 2020, 4:52 PM IST

ಬೆಂಗಳೂರು:ಪಾಂಡವಪುರ ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆ ರೀತಿಯಲ್ಲಿಯೇ ಮಂಡ್ಯದ ಮೈ‌ ಶುಗರ್ ಸಕ್ಕರೆ ಕಾರ್ಖಾನೆಯನ್ನು ಪಿಪಿಪಿ ಮಾದರಿಯಲ್ಲಿ 40 ವರ್ಷ ಲೀಸ್​​ಗೆ ನೀಡಲಾಗುತ್ತೆ ಎಂದು ಸಕ್ಕರೆ ಸಚಿವ ಶಿವರಾಮ್‌ ಹೆಬ್ಬಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ ಸದಸ್ಯ‌ ಶ್ರೀಕಂಠೇಗೌಡ, ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಪರಿಹಾರ ಕಾರ್ಯಾಚರಣೆ ಮಾಡಲಾಗಿದೆ ಎಂದು ರಾಜ್ಯಪಾಲರ‌ ಭಾಷಣದಲ್ಲಿ ಹೇಳಲಾಗಿದೆ. ಆದರೆ ಇದರಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದೆ. ಇದನ್ನು ಸಚಿವರೂ ಒಪ್ಪಿಕೊಂಡಿದ್ದಾರೆ. ಯಾವ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಮಂಡ್ಯದ ಮೈ ಶುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡದೆ ಸರ್ಕಾರದಿಂದಲೇ ಹೊಸದಾಗಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪನೆ ಮಾಡಬೇಕು. ಪಾಂಡವಪುರ ಮತ್ತು ಶ್ರೀರಾಮ ಸಕ್ಕರೆ ಕಾರ್ಖಾನೆ ಲೀಸ್‌ಗೆ ಕೊಡಲು ವಿರೋಧ ಇಲ್ಲ. ಆದರೆ ಮೈ ಶುಗರ್​​ಗೆ ರೈತರ ವಿರೋಧ ಇದೆ. ಸರ್ಕಾರಿ ಕಾರ್ಖಾನೆಯಲ್ಲಿ ರೈತರ ಷೇರು ಇದೆ. ಹಾಗಾಗಿ ಹೊಸ ಕಾರ್ಖಾನೆ ಸ್ಥಾಪಿಸಲು ಮುಂದಾಗುವ ನಿರ್ಣಯ ಕೈಗೊಂಡಿದ್ದಾರೆ. ಅದನ್ನು ಮಾಡಬೇಕು, ಅದರ ಬದಲು ಖಾಸಗೀಕರಣ ಸಲ್ಲದು ಎಂದರು.

ಆದರೆ ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಿವರಾಮ್ ಹೆಬ್ಬಾರ್, ಈಗಾಗಲೇ 176 ಸಿಬ್ಬಂದಿ ವಿಆರ್‌ಎಸ್ ಪಡೆದಿದ್ದಾರೆ. 70 ಜನ ಮಾತ್ರ ಬಾಕಿ ಇದ್ದಾರೆ ಅಷ್ಟೇ. ಸಿಬ್ಬಂದಿ ಇಲ್ಲ, ಹಣ ನೀಡಿ‌ ಪುನರುಜ್ಜೀವನ ಮಾಡಲು‌ ಸಾಧ್ಯವಾಗಿಲ್ಲ. ಹಾಗಾಗಿ ರೈತರ ನೆರವಿಗಾಗಿಯೇ ಖಾಸಗೀಕರಣ ಮಾಡಲಾಗುತ್ತಿದೆ ಎಂದು ಮಂಡ್ಯದ ಮೈ‌ ಶುಗರ್ ಕಾರ್ಖಾನೆ ಖಾಸಗೀಕರಣ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ABOUT THE AUTHOR

...view details