ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ಕಾರ್ಯಕ್ಕೆ ಮೆಚ್ಚಿ ನನ್ನ ಬೆಂಬಲ ಬಿಜೆಪಿಗೆ: ಸಂಸದೆ ಸುಮಲತಾ ಘೋಷಣೆ

ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಮಹತ್ವದ ರಾಜಕೀಯ ನಿರ್ಧಾರ ಪ್ರಕಟಿಸಿದ ಮಂಡ್ಯ ಸಂಸದೆ ಸುಮಲತಾ ಅವರು ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸುವುದಾಗಿ ಘೋಷಿಸಿದ್ದಾರೆ.

mandya-mp-sumalata-talks-on-next-political-step
ಮಂಡ್ಯದತ್ತ ಹೊರಟ ಸುಮಲತಾ: ಕೆಲವೇ ಕ್ಷಣದಲ್ಲಿ ರಾಜಕೀಯ ನಿರ್ಧಾರ ಪ್ರಕಟ

By

Published : Mar 10, 2023, 11:08 AM IST

Updated : Mar 10, 2023, 2:09 PM IST

ಮಂಡ್ಯ/ಬೆಂಗಳೂರು:ಇದು ನನ್ನ ಭವಿಷ್ಯ ಅಲ್ಲ, ಇದು ಮಂಡ್ಯ ಜಿಲ್ಲೆ ಅಭಿವೃದ್ಧಿ. ಈ ನಿರ್ಧಾರ ಮಾಡಲು 4 ವರ್ಷ ತೆಗೆದುಕೊಂಡಿದ್ದೇನೆ. ನಾನು ಇಷ್ಟು ಯೋಜನೆ ತರಲು ಸಹಕಾರ ಮಾಡಿದ್ದು ಕೇಂದ್ರ ಬಿಜೆಪಿ ಸರ್ಕಾರ. ನನ್ನ ಇವತ್ತಿನ ನಿರ್ಧಾರ ಒಂದಷ್ಟು ಜನಕ್ಕೆ ಬೇಜಾರು ಆಗಬಹುದು. ನನ್ನ ಮುಂದಿನ ಭವಿಷ್ಯ ಹೇಗಿರುತ್ತೆ ಎಂದು ಆತಂಕ ಕಾಡಬಹುದು. ಆದರೆ, ನನಗೆ ಅದ್ಯಾವ ಯೋಚನೆಯೂ ಇಲ್ಲ. ನಾನು ಬಿಜೆಪಿಗೆ ಸಂಪೂರ್ಣ ಬೆಂಬಲ ಸೂಚಿಸುತ್ತಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಗಳು ಮತ್ತು ನಾಯಕತ್ವ ಮೆಚ್ಚಿ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದೇನೆ ಎಂದು ಸಂಸದೆ ಸುಮಲತಾ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಸನಿಹದಲ್ಲಿ ಸುಮಲತಾ ಅವರ ಈ ಮಹತ್ವದ ನಿರ್ಧಾರ ಮೈಸೂರು ಪ್ರಾಂತ್ಯದ ರಾಜಕೀಯದಲ್ಲಿ ಮಹತ್ವದ್ದಾಗಿದೆ. ಕಳೆದ ಹಲವು ದಿನಗಳಿಂದ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಮಂಡ್ಯದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಸುಮಲತಾ ಅವರು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.

ಮಂಡ್ಯಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸುಮಲತಾ, ಇನ್ನು ಒಂದು ಗಂಟೆಗಳಲ್ಲಿ ತನ್ನ ನಿರ್ಧಾರ ಏನೆಂದು ಮಂಡ್ಯದಲ್ಲೇ ತಿಳಿಸುತ್ತೇನೆ. ಎಲ್ಲದಕ್ಕೂ ಮಂಡ್ಯದಲ್ಲೇ ಉತ್ತರ ಕೊಡುತ್ತೇನೆ. ನನ್ನ ಜನ, ನನ್ನ ಜಿಲ್ಲೆಯ ಮಂಡ್ಯದಲ್ಲಿ ನನ್ನ ಎಲ್ಲ ನಿರ್ಧಾರ ಆಗಲಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಭೇಟಿ ಕುರಿತೂ ಅಲ್ಲೇ ಮಾತಾಡುತ್ತೇನೆ. ಕುಮಾರಸ್ವಾಮಿ ಅವರ ಟೀಕೆಗೂ ಅಲ್ಲಿಯೇ ಉತ್ತರಿಸುವೆ ಎಂದಿದ್ದರು.

ಕಳೆದ ರಾತ್ರಿ ನಗರದ ಶಾಂಗ್ರಿಲಾ ಹೋಟೆಲ್​ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರನ್ನು ಭೇಟಿ ಮಾಡಿದ್ದ ಸುಮಲತಾ ಅಂಬರೀಶ್ ಅರ್ಧ ಗಂಟೆ ಕಾಲ ಚರ್ಚಿಸಿದ್ದರು. ಚಿತ್ರರಂಗದ ಜೊತೆ ಅಂಬರೀಶ್ ಕುಟುಂಬಕ್ಕೆ ಅತ್ಯಾಪ್ತರಾಗಿರುವ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆ ಶಾಂಗ್ರಿಲಾ ಹೋಟೆಲ್​ಗೆ ಆಗಮಿಸಿದ್ದ ಸುಮಲತಾ ಜೆಪಿ ನಡ್ಡಾ ಜೊತೆ ರಾಜಕೀಯ ವಿಚಾರಗಳ ಕುರಿತು ಮಹತ್ವದ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾದ ಸುಮಲತಾ: ಹೆಚ್ಚಿದ ಕುತೂಹಲ

Last Updated : Mar 10, 2023, 2:09 PM IST

ABOUT THE AUTHOR

...view details