ಬೆಂಗಳೂರು:ಅಕ್ರಮವಾಗಿ ಮದ್ಯ ಸಂಗ್ರಹಿಸಿ ಆಫ್ರಿಕನ್ ಪ್ರಜೆಗಳಿಗೆ ಮಾರಾಟ ಮಾಡ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಆಫ್ರಿಕಾ ಖಂಡದ ಐವರಿ ಕೋಸ್ಟ್ ದೇಶದ ಕೇಹಿ ಅಲೆಕ್ಸಾಂಡರ್ ಬಂಧಿತ ಎಂದು ಆರೋಪಿಯನ್ನು ಗುರುತಿಸಲಾಗಿದೆ. ಹೆಣ್ಣೂರು ಠಾಣೆ ಪೊಲೀಸರಿಂದ ಆರೋಪಿ ಕೇಹಿ ಅಲೆಕ್ಸಾಂಡರ್ ಬಂಧನವಾಗಿರುವ ಮಾಹಿತಿ ದೊರೆತಿದೆ. ಸ್ಟೂಡೆಂಟ್ ವೀಸಾದಡಿ ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಅಲೆಕ್ಸಾಂಡರ್ ಮಾಸ್ಟರ್ ಡಿಗ್ರಿ ಮಾಡಲು ಬಂದಿದ್ದ.
ಆಫ್ರಿಕನ್ ಪ್ರಜೆಗಳಿಗೆ ಅಕ್ರಮ ಮದ್ಯ ಮಾರಾಟ: ಐವರಿ ಕೋಸ್ಟದ ಆರೋಪಿ ಅರೆಸ್ಟ್ - ಆಫ್ರಿಕನ್ ಪ್ರಜೆಗಳಿಗೆ ಅಕ್ರಮ ಮದ್ಯ ಮಾರಾಟ
ಅಕ್ರಮವಾಗಿ ಮದ್ಯ ಸಂಗ್ರಹಿಸಿ ಆಫ್ರಿಕನ್ ಪ್ರಜೆಗಳಿಗೆ ಮಾರಾಟ ಮಾಡ್ತಿದ್ದ ಆಫ್ರಿಕಾ ಖಂಡದ ಐವರಿ ಕೋಸ್ಟ್ ದೇಶದ ಕೇಹಿ ಅಲೆಕ್ಸಾಂಡರ್ ಎಂಬ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈತ ಸ್ಟೂಡೆಂಟ್ ವೀಸಾದಡಿ ಭಾರತಕ್ಕೆ ಬಂದಿದ್ದ ಎಂದು ತಿಳಿದು ಬಂದಿದೆ.
arrest
ಖಚಿತ ಮಾಹಿತಿ ಮೇರೆಗೆ ಬಾಬುಸಪಾಳ್ಯದ ಆರೋಪಿಯ ನಿವಾಸದ ಮೇಲೆ ಹೆಣ್ಣೂರು ಪೊಲೀಸರಿಂದ ದಾಳಿ ನೆಡೆದಿದ್ದು, ದಾಳಿ ವೇಳೆ 4 ವಿಧದ 237 ಬಿಯರ್ ಬಾಟಲ್ಗಳನ್ನು ವಶಕ್ಕೆ ಪಡೆಯಲಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಜಾಮೀನು ಕೋರಿದ್ದ ಅತ್ಯಾಚಾರ ಆರೋಪಿಯ ಅರ್ಜಿ ವಜಾ