ಕರ್ನಾಟಕ

karnataka

ETV Bharat / state

ಪತ್ನಿ ಜತೆ ಹನಿಮೂನ್‌ಗೆ ಹೋದವ ಪ್ರೇಯಸಿ ಜತೆಗೂ ಡಿಂಗಿಚಕ್ಕ ಡಿಂಗಿಚಕ್ಕ!! - ಪತ್ನಿ ಜೊತೆ ಲವ್ವರ್​ನೂ ಹನಿಮೂನ್​ಗೆ ಕರೆದೊಯ್ದ ಭೂಪ

ಊಟಿಗೆ ಹೋದವ ಪತ್ನಿ ಜೊತೆ ಹನಿಮೂನ್ ಮಾಡುವ ಬದಲು ಹಳೇ ಲವರ್ ಜೊತೆ ತಿರುಗುತ್ತಿದ್ದ. ಇದನ್ನು ಕಂಡ ಪತ್ನಿ ಆ ಸಂಬಂಧಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಳು..

Man went honeymoon with wife and lover is caught
ಪತ್ನಿ ಜೊತೆ ಲವ್ವರ್​ನೂ ಹನಿಮೂನ್​ಗೆ ಕರೆದೊಯ್ದ ಭೂಪ

By

Published : Jul 8, 2020, 4:54 PM IST

Updated : Jul 8, 2020, 5:24 PM IST

ಬೆಂಗಳೂರು :ಮದುವೆಯಾಗಿ ಹನಿಮೂನ್​ಗೆ ಹೋದ ಭೂಪನೊಬ್ಬ ಪತ್ನಿ ಜತೆಗೆ ಪ್ರೇಯಸಿಯನ್ನೂ ಕರೆದುಕೊಂಡು ಹೋಗಿ ಸಿಕ್ಹಾಕಿಕೊಂಡಿರೋ ಘಟನೆ ನಗರದಲ್ಲಿ ನಡೆದಿದೆ.

ಬಳ್ಳಾರಿ ಮೂಲದ ಮಂಜುನಾಥ್ ಎಂಬಾತ ಇದೇ ವರ್ಷ‌ ಬೆಂಗಳೂರಿನ ಯುವತಿಯೊಬ್ಬರನ್ನು ಮದುವೆಯಾಗಿದ್ದ.ಆತ ಸಂಡೂರಿನಲ್ಲಿ ಕೆಲಸ ಮಾಡುತ್ತಿದ್ದ. ಪತ್ನಿಯನ್ನು ಅವರ ಮನೆಯಲ್ಲಿ ಬಿಟ್ಟು ಬಂದಿದ್ದ. ಆಗಾಗ ಬೆಂಗಳೂರಿಗೆ ಬಂದು ಪತ್ನಿಯನ್ನ ಭೇಟಿಯಾಗಿ ವಾಪಸ್​ ಹೋಗುತ್ತಿದ್ದ. ಮೂರು ತಿಂಗಳ ಹಿಂದೆ ಹನಿಮೂನ್​ಗೆ ಪ್ಲಾನ್​ ಮಾಡಿದ್ದ.

ದೂರಿನ ಪ್ರತಿ

ಹನಿಮೂನ್‌ಗೆ ಹೋಗುವಾಗ ತನ್ನ ಮಾಜಿ ಪ್ರೇಯಸಿಯನ್ನೂ ಕರೆದಿದ್ದನಂತೆ. ಊಟಿಗೆ ಹೋದವನು ಪತ್ನಿ ಜೊತೆ ಹನಿಮೂನ್ ಮಾಡುವ ಬದಲು ಹಳೇ ಲವರ್ ಜೊತೆ ತಿರುಗುತ್ತಿದ್ದ. ಇದನ್ನು ಕಂಡ ಪತ್ನಿ ಆ ಸಂಬಂಧಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಳು. ಈ ವೇಳೆ ಪ್ರೆಯಸಿಯು ಮಂಜುನಾಥನ ಪತ್ನಿಗೆ ಬೆದರಿಕೆ ಹಾಕಿ, ನಿನ್ನ ಗಂಡ ಏನ್ ಅನ್ನೋದು ಗೊತ್ತು ಎ‌ಂದು ಬೆದರಿಕೆ ಹಾಕಿದ್ದಾಳೆ. ಇದರಿಂದ ಗಾಬರಿಗೊಂಡ ಪತ್ನಿ, ಗಂಡ ಮಂಜುನಾಥನನ್ನು ಪ್ರಶ್ನಿಸಿದ್ದಾಳೆ. ಇದಕ್ಕೆ ನಾನು ಮಾಡಿದ್ದು ತಪ್ಪು, ಇನ್ಮುಂದೆ ಇಂಥ ಕೆಲಸ ಮಾಡಲ್ಲವೆಂದು ಮಂಜುನಾಥ್ ಪತ್ನಿ ಮುಂದೆ ಬೇಡಿಕೊಂಡಿದ್ದ. ಪತ್ನಿಯೂ ಕೂಡ ಆತನ ಮಾತನ್ನು ನಂಬಿದ್ದಳು.

ಆದರೆ, ಊರಲ್ಲಿ ಹೆಂಡತಿಯ ಮೇಲೆ ಕೋಪಗೊಂಡು ಪತಿ, ಹನಿಮೂನ್ ಹೈಡ್ರಾಮಾ ಮುಂದಿಟ್ಟುಕೊಂಡು ಪತ್ನಿಯನ್ನು ಒಂಟಿ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಬಳಿಕ ಮನೆಯಿಂದ 5 ಲಕ್ಷ ರೂ. ತರುವಂತೆ ಚಿತ್ರ ಹಿಂಸೆ ನೀಡಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಊಟ, ತಿಂಡಿ ಕೊಡದೆ ಸತಾಯಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂಸೆ ತಾಳಲಾರದೆ ಮಹಿಳೆ ತನ್ನ ತಂದೆ-ತಾಯಿ ಬಳಿ ಅಳಲು ತೋಡಿಕೊಂಡಿದ್ದಾಳೆ.

ಈ ವೇಳೆ ಹಿರಿಯರು ಸೇರಿ ಮಂಜುನಾಥ್​ಗೆ ಬುದ್ಧಿವಾದ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಮಂಜುನಾಥ್ ನಿಮ್ಮ ಮಗಳನ್ನ ನೀವೇ ಇಟ್ಟುಕೊಳ್ಳಿ, ಅವಳು ವಾಪಸ್ ಬಂದ್ರೆ ಕೈಯಲ್ಲಿ ₹25 ಲಕ್ಷ ತರಬೇಕು. ಇಲ್ಲವಾದಲ್ಲಿ ನಾನು ನನ್ನ ಲವ್ವರ್​​ನನ್ನೇ ಮದುವೆಯಾಗುತ್ತೇನೆ ಎಂದಿದ್ದನಂತೆ. ಸದ್ಯ ನೊಂದ ಮಹಿಳೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಂಪ್ಲೇಂಟ್ ದಾಖಲಾಗುತ್ತಿದ್ದಂತೆ ಪತಿ ಮಂಜುನಾಥ್ ಪರಾರಿಯಾಗಿದ್ದಾನೆ.

Last Updated : Jul 8, 2020, 5:24 PM IST

ABOUT THE AUTHOR

...view details