ಕರ್ನಾಟಕ

karnataka

ETV Bharat / state

ಡಾಕ್ಟರ್ ಸೋಗಿನಲ್ಲಿ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ: ಸಿಸಿಟಿವಿಯಲ್ಲಿ ಸೆರೆ - ಬೆಂಗಳೂರು ಕ್ರೈಂ ನ್ಯೂಸ್

ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಡಾಕ್ಟರ್ ಸೋಗಿನಲ್ಲಿ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ
ಡಾಕ್ಟರ್ ಸೋಗಿನಲ್ಲಿ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ

By

Published : Sep 4, 2022, 12:21 PM IST

ಬೆಂಗಳೂರು: ತಾನು ಅಪೋಲೋ ಆಸ್ಪತ್ರೆಯಲ್ಲಿ ವೈದ್ಯನೆಂದು ಪರಿಚಯ ಮಾಡಿಕೊಂಡು ಜ್ಯುವೆಲ್ಲರಿ ಶಾಪ್​​ಗೆ ಬಂದ ವ್ಯಕ್ತಿ ಚಿನ್ನಾಭರಣ ಕದ್ದೊಯ್ದು ಸಿಕ್ಕಿಬಿದ್ದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಜಯನಗರದ 8ನೇ ಬ್ಲಾಕ್​​ನಲ್ಲಿನ ಕಮಕಲಾಲ್ ಚಿನ್ನದ ಅಂಗಡಿಯಲ್ಲಿ ಕಳ್ಳ ಕೈಚಳಕ ತೋರಿಸಿದ್ದ.

ಮೊದಲಿಗೆ ಅಂಗಡಿಯಲ್ಲಿ ಬೆಳ್ಳಿಯ ನಾಣ್ಯ ಖರೀದಿಸಿದ ಆರೋಪಿ ರಾಹುಲ್, ಬಳಿಕ ತನ್ನ‌ ತಂಗಿ ಮದುವೆಗೆ ಚಿನ್ನ ಬೇಕು ಎಂದು ಹೇಳಿ 32 ಗ್ರಾಂ‌ ತೂಕದ ಚಿನ್ನದ ನೆಕ್ಲೆಸ್, 75 ಗ್ರಾಂ ತೂಕದ ಲಾಂಗ್ ಚೈನ್, 22 ಗ್ರಾಂ ತೂಕದ ಬ್ರಾಸ್ಲೆಟ್ ಕೊಂಡಿದ್ದ ಎಂದು ಪ್ರಕರಣದ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಸಿಟಿವಿಯಲ್ಲಿ ಸೆರೆ

ನಂತರ ತನ್ನ ಸಂಬಂಧಿ ಹಣ ತರುತ್ತಾರೆಂದು ನಂಬಿಸಿದ ಆರೋಪಿ ಸುಮಾರು‌ 2 ಗಂಟೆ ಕಾಲ ಅಂಗಡಿಯಲ್ಲಿ ಕಾಲ ಕಳೆದಿದ್ದಾನೆ. ಆಗ ತಾನು ಕದಿಯಬಹುದಾದ ವಸ್ತುಗಳ ಬಗ್ಗೆ ಸ್ಕೆಚ್ ಹಾಕಿದ್ದಾನೆ. ನಂತರ ಬೆಳ್ಳಿಯ ಫೋಟೋ ಫ್ರೇಮ್ ಬೇಕು ಎಂದು ಕೇಳಿದ್ದ. ಅಂಗಡಿಯವರು ಫ್ರೇಮ್ ತರಲು ಒಳಗೆ ಹೋದಾಗ ರ್ಯಾಕ್​​ನಲ್ಲಿಟ್ಟ ಒಡವೆ ಬಾಕ್ಸ್ ಸಮೇತ ಎಸ್ಕೇಪ್ ಆಗಿದ್ದ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಎಂಟು ಜನ ಶ್ರೀಗಂಧ ಮರ ಕಳ್ಳರ ಬಂಧನ: ₹3 ಕೋಟಿ ಮೌಲ್ಯದ ಮಾಲು ವಶ

ABOUT THE AUTHOR

...view details