ಕರ್ನಾಟಕ

karnataka

ETV Bharat / state

ಕಾಟನ್ ಪೇಟೆಯಲ್ಲಿ ಸರಣಿ ಚಾಕು ಇರಿತ ಪ್ರಕರಣ: ಮೃತರ ಸಂಖ್ಯೆ 2ಕ್ಕೆ ಏರಿಕೆ - ಕಾಟನ್​ ಪೇಟೆ ಸರಣಿ ಚಾಕು ಇರಿತ ಕೇಸ್​

ಬೆಂಗಳೂರಿನ ಕಾಟನ್​ಪೇಟೆಯಲ್ಲಿ ವ್ಯಕ್ತಿಯೋರ್ವನಿಂದ 6 ಜನರಿಗೆ ಸರಣಿ ಚಾಕು ಇರಿತ ಪ್ರಕರಣದಲ್ಲಿ ಗಾಯಗೊಂಡಿದ್ದ ರಾಜೇಶ್​ ಎಂಬಾತ ಇಂದು ಸಾವನ್ನಪ್ಪಿದ್ದಾನೆ.

bengaluru
ಕಾಟನ್ ಪೇಟೆ

By

Published : Oct 19, 2020, 11:33 AM IST

ಬೆಂಗಳೂರು: ‌ನಗರದ ಕಾಟನ್ ಪೇಟೆಯಲ್ಲಿ ನಡೆದ ಸರಣಿ ಚಾಕು ಇರಿತ ಪ್ರಕರಣದಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಬಾಳೆ ಮಂಡಿಯಲ್ಲಿ ಕೆಲಸ ಮಾಡ್ತಿದ್ದ ರಾಜೇಶ್ (28) ಸಾವನ್ನಪ್ಪಿದ ವ್ಯಕ್ತಿ. ನಿನ್ನೆ ಗಣೇಶ್ ಎಂಬಾತ ಕಾಟನ್ ಪೇಟೆ ವ್ಯಾಪ್ತಿಯಲ್ಲಿ ಆರು ಜನಕ್ಕೆ ಚಾಕು ಇರಿದಿದ್ದ. ಈ ವೇಳೆ ರಾಜೇಶ್​ಗೂ ಗಣೇಶ್​ ಚಾಕುವಿನಿಂದ ಚುಚ್ಚಿದ್ದ. ಹೊಟ್ಟೆ ಭಾಗಕ್ಕೆ ಚಾಕು ತಾಗಿದ್ದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್​ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದೀಗ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದೆ.

ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆ ಮಂಡಿ ಬಳಿ ಗಣೇಶ್ ಎಂಬಾತ ಮಟನ್ ಖರೀದಿಗಾಗಿ ಬಂದಿದ್ದು, ಇದೇ ವೇಳೆ ಮಟನ್ ಅಂಗಡಿಯಿಂದ ಚಾಕು ತಂದು ದಾರಿಯುದ್ದಕ್ಕೂ ಸುಮಾರು ಆರೇಳು ಜನರಿಗೆ ಚಾಕು ಇರಿದುಕೊಂಡು ಹೋಗಿದ್ದಾನೆ. ತಕ್ಷಣ ಬೀಟ್​ನಲ್ಲಿದ್ದ ಪೊಲೀಸರು ಆರೋಪಿಯನ್ನ ಹಿಡಿದು ಮುಂದೆ ಆಗಬಹುದಾಗಿದ್ದ ಮತ್ತಷ್ಟು ಅನಾಹುತಗಳನ್ನು ತಪ್ಪಿಸಿದ್ದಾರೆ.

ಆರೋಪಿ ಗಣೇಶ್​​

ಕಾಟನ್ ಪೇಟೆ ಪೊಲೀಸ್​ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಆರೋಪಿ‌ ಗಣೇಶ್​ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಾಣುವ ಕಾರಣ, ಚಿಕಿತ್ಸೆಗೆ ಒಳಪಡಿಸಿ ಆತನ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ಚಾಕು ಇರಿತಕ್ಕೊಳಗಾದ ಉಳಿದ ನಾಲ್ವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details