ಬೆಂಗಳೂರು: ಕೊಡಿಸಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಕ್ರಿಕೆಟ್ ಬ್ಯಾಟ್ನಿಂದ ಹೊಡೆದು ವ್ಯಕ್ತಿಯೋರ್ವನನ್ನು ಹತ್ಯೆ ಮಾಡಿರುವ ಘಟನೆ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಕೊಳಲು ಬಳಿಯ ಅಪಾರ್ಟ್ಮೆಂಟ್‌ನಲ್ಲಿ ನಡೆದಿದೆ. ವೆಂಕಟೇಶಪ್ಪ ಮೃತ ವ್ಯಕ್ತಿ. ಶಿವಪ್ಪ ಹತ್ಯೆಗೈದ ಆರೋಪಿ.
ಪ್ರಕರಣದ ವಿವರ:ವೆಂಕಟೇಶಪ್ಪ, ನಂಜುಂಡ ರೆಡ್ಡಿ ಹಾಗೂ ಪ್ರಕಾಶ ಎಂಬುವವರಿಂದ ಶಿವಪ್ಪ ಅವರಿಗೆ ಸಾಲ ಕೊಡಿಸಿದ್ದರಂತೆ. ಆದರೆ ಶಿವಪ್ಪ ಸಾಲವನ್ನು ವಾಪಸ್ ನೀಡಿರಲಿಲ್ಲ. ಅನೇಕ ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸಿರಲಿಲ್ಲ. ತನ್ನ ಮಧ್ಯಸ್ಥಿಕೆಯಲ್ಲಿ ಸಾಲ ಕೊಡಿಸಿದ್ದ ಕಾರಣ ವೆಂಕಟೇಶಪ್ಪ, ಶಿವಪ್ಪನನ್ನು ವಿಚಾರಿಸಲು ಮುನೇಕೊಳಲು ಬಳಿ ಇರುವ ಪರ್ಲ್ ಅಪಾರ್ಟ್ಮೆಂಟ್ಗೆ ಬಂದಿದ್ದರು.