ಆನೇಕಲ್: ಯುವಕನೋರ್ವನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಸಂದ್ರದಲ್ಲಿ ನಡೆದಿದೆ.
ಪ್ರೇಮಿಗಳ ಜಗಳ ಬಿಡಿಸಿ ಸಂಧಾನಕ್ಕೆಂದು ಹೋದ ಯುವಕನ ಬರ್ಬರ ಹತ್ಯೆ! - ಯುವಕ ಕೊಲೆ
ಇಬ್ಬರು ಪ್ರೇಮಿಗಳ ಜಗಳ ಬಿಡಿಸಿ ಸಂಧಾನ ಮಾಡಲು ಹೋದ ಯುವಕನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಸಂದ್ರದಲ್ಲಿ ನಡೆದಿದೆ.
ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಗ್ರಾಮದ ಕಿರಣ್ ರೆಡ್ಡಿ(25) ಕೊಲೆಯಾದ ಯುವಕ. ಇಬ್ಬರು ಪ್ರೇಮಿಗಳ ಜಗಳ ಬಿಡಿಸಿ ಸಂಧಾನ ಮಾಡಲು ಹೋದ ಯುವಕನನ್ನು ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಂದಿರುವ ಘಟನೆ ನಡೆದಿದೆ. ಕೊಲೆ ಆರೋಪಿಗಳು ಸಂಧಾನಕ್ಕೆ ಕರೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಮ್ ಟ್ರೈನರ್ ಆಗಿದ್ದ ಕಿರಣ್ ತನ್ನ ಮಾತು ಕೇಳಬಹುದು ಎಂದು ಸಂಧಾನದ ನೇತೃತ್ವ ವಹಿಸಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳು ರಾಮಸಂದ್ರ ಗ್ರಾಮಕ್ಕೆ ಸೇರಿದವರು ಎಂದು ಶಂಕಿಸಲಾಗಿದೆ. ಕೊಲೆ ಆರೋಪಿಗಳ ಬಂಧನಕ್ಕಾಗಿ ಬನ್ನೇರುಘಟ್ಟ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದು, ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿದ್ದಾರೆ.