ಕರ್ನಾಟಕ

karnataka

ETV Bharat / state

ಬೆಂಗಳೂರು: ಪತ್ನಿ ಹತ್ಯೆಗೈದು ಪುಟ್ಟ ಮಗುವಿಗೂ ಚಾಕು ಇರಿದ! - ಕತ್ತು‌ ಕೊಯ್ದು ಕೊಲೆ

ಪತ್ನಿಯ ಕತ್ತು ಕೊಯ್ದ ಹತ್ಯೆಗೈದ ಪತಿ ಆಕೆಯ ಮಗುವಿಗೂ ಚಾಕು ಇರಿದಿದ್ದಾನೆ. ಬೆಂಗಳೂರಿನಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದೆ.

Bengaluru
ಶೇಕ್ ಸೊಹೈಲ್ - ಆರೋಪಿ

By

Published : Mar 21, 2023, 11:52 AM IST

Updated : Mar 21, 2023, 1:08 PM IST

ಬೆಂಗಳೂರು:ಹೆಂಡತಿಯ ಕತ್ತು ಕೊಯ್ದು ಕೊಂದಿರುವ ಪಾಪಿ ಪತಿಯೊಬ್ಬ ಆಕೆಯ ಮಗುವನ್ನೂ ಗಾಯಗೊಳಿಸಿದ ಘಟನೆ ತಡರಾತ್ರಿ ಹೆಣ್ಣೂರು ಠಾಣಾ ವ್ಯಾಪ್ತಿಯ ಸಾರಾಯಿ ಪಾಳ್ಯದಲ್ಲಿ ನಡೆದಿದೆ. ಶೇಕ್ ಸೊಹೈಲ್ ಎಂಬಾತ ತನ್ನ ಪತ್ನಿ ತಬ್ಸೆನ್ ಬೇಬಿ (32) ಎಂಬಾಕೆಯನ್ನು ಕೊಲೆಗೈದಿದ್ದಾನೆ. ಆಕೆಯ ಮಗು ನಯೀಮ್ (2.6 ವರ್ಷ) ಎಡಕಾಲಿಗೂ ಚಾಕು ಇರಿದಿದ್ದಾನೆ.

ಕೊಲ್ಕತ್ತಾ ಮೂಲದ ಶೇಕ್ ಸೊಹೈಲ್ ಮತ್ತು ತಬ್ಸೆನ್ ಬೇಬಿಗೆ 14 ವರ್ಷಗಳ ಹಿಂದೆ ವಿವಾಹವಾಗಿತ್ತು. 2013ರಲ್ಲಿ ಬೆಂಗಳೂರಿಗೆ ಬಂದಿದ್ದ ದಂಪತಿ ಕೆ.ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ಪತ್ನಿಗೆ ಸೈಯ್ಯದ್ ನದೀಮ್ ಎಂಬಾತನ ಜತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ ಶೇಕ್ ಸೊಹಿಲ್, ಪತ್ನಿಯನ್ನು ವಾಪಸ್ ಕೊಲ್ಕತ್ತಾಗೆ ಕರೆದೊಯ್ದಿದ್ದ.

ಆದರೆ ಕಳೆದ ಎರಡು ವರ್ಷಗಳ ಹಿಂದೆ ತಬ್ಸೆನ್ ಬೇಬಿ ಗಂಡನನ್ನು ಬಿಟ್ಟು ಬೆಂಗಳೂರಿಗೆ ಬಂದು ಸೈಯದ್ ನದೀಮ್‌ನೊಂದಿಗೆ ವಾಸಿಸಲಾರಂಭಿಸಿದ್ದಳು. ಇಬ್ಬರಿಗೂ ಒಂದು ಮಗು ಸಹ ಜನಿಸಿತ್ತು. ಈ ವಿಚಾರ ತಿಳಿದು ಬೆಂಗಳೂರಿಗೆ ಬಂದಿದ್ದ ಆರೋಪಿ, ನಿನ್ನೆ(ಸೋಮವಾರ) ರಾತ್ರಿ ಪತ್ನಿ ವಾಸವಿದ್ದ ಕೆ.ಜಿ.ಹಳ್ಳಿಯ ಮನೆಗೆ ಬಂದಿದ್ದ. ನದೀಂನಿಂದ ಮಗುವಾಗಿದ್ದ ಬಗ್ಗೆ ಇಬ್ಬರ ನಡುವೆ ಗಲಾಟೆ ಆರಂಭವಾಗಿತ್ತು. ಮದ್ಯದ ಅಮಲಿನಲ್ಲಿದ್ದ ಆರೋಪಿ ಏಕಾಏಕಿ ತಬ್ಸೆನ್ ಬೇಬಿಯ ಕತ್ತು ಕೊಯ್ದು ಕೊಲೆಗೈದು ಬಳಿಕ ಮಗುವಿನ ಕಾಲಿಗೆ ಚಾಕು ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

"ಅಕ್ಕಪಕ್ಕದವರ ಮಾಹಿತಿ ಅನ್ವಯ ಸ್ಥಳಕ್ಕೆ ಧಾವಿಸಿದ ಹೆಣ್ಣೂರು ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶೇಕ್ ಸೊಹೈಲ್​ನ ಕೃತ್ಯದಿಂದ ತಬ್ಸೆನ್ ಬೇಬಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ" ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ಮಾಹಿತಿ ನೀಡಿದರು.

ಪತ್ನಿ ಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಪತಿ: ಕಂಠಪೂರ್ತಿ ಕುಡಿದು ಪತ್ನಿಯನ್ನು ಸಾಯಿಸಲು ಯತ್ನಿಸಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ ವಿರುದ್ಧ ಆರ್‌.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಂಡತಿ ಸುಧಾರಾಣಿಯ ತಲೆಯನ್ನು ಗೋಡೆಗೆ ಗುದ್ದಿರುವ ಆರೋಪಿ ಪತಿ ಹರ್ಷ ಬಳಿಕ ಚಾಕುವಿನಿಂದ ಇರಿದುಕೊಂಡು ಸಾವಿಗೆ ಶರಣಾಗುವ ಪ್ರಯತ್ನ ಮಾಡಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಬೆಂಗಳೂರು: ಪತ್ನಿ ಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ ಪತಿ

ನಾಲ್ವರಿಂದ ಆತ್ಮಹತ್ಯೆ ಯತ್ನ: ನೀರಿನ ಟ್ಯಾಂಕ್‌ ಕಟ್ಟಲು ನಿರ್ಮಾಣ ಹಂತದ ಮನೆಯ ತಡೆಗೋಡೆ ಕೆಡವಿದ್ದರಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳ್ಳಾರಿ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ರಾಜೇಶ್, ಶೇಖಪ್ಪ, ಸುಶೀಲಮ್ಮ ಮತ್ತು ಜ್ಯೋತಿ ಆತ್ಮಹತ್ಯೆಗೆ ಯತ್ನಿಸಿದವರು. ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಬಳ್ಳಾರಿ: ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆ ಯತ್ನ

Last Updated : Mar 21, 2023, 1:08 PM IST

ABOUT THE AUTHOR

...view details