ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಯುವಕರ ನಡುವೆ ಜಗಳ: ಹಣಕ್ಕಾಗಿ ಬಿತ್ತು ಓರ್ವನ ಹೆಣ! - ಹಣದ ವಿಚಾರಕ್ಕೆ ಯುವಕನ ಕೊಲೆ

ಮೆಹಬೂಬ್ (19) ಕೊಲೆಯಾದ ಯುವಕ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎ. ಕೆ ಕಾಲೋನಿಯಲ್ಲಿ ಪ್ರಕರಣ ನಡೆದಿದೆ. ಮಂಗಳವಾರ ರಾತ್ರಿ 8 ಗಂಟೆಯ ಸಮಯದಲ್ಲಿ 1200 ರೂ. ಹಣ ಕೊಡುವ ವಿಚಾರವಾಗಿ ಪರಿಚಿತ ಯುವಕರ ನಡುವೆ ಜಗಳ ನಡೆದು ಮೆಹಬೂಬ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Bengaluru
ಬೆಂಗಳೂರು

By

Published : Jan 5, 2022, 10:53 PM IST

ಬೆಂಗಳೂರು:ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಜಗಳ ಉಂಟಾಗಿ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಮೆಹಬೂಬ್(19) ಕೊಲೆಯಾದ ಯುವಕ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎ. ಕೆ ಕಾಲೋನಿಯಲ್ಲಿ ಪ್ರಕರಣ ನಡೆದಿದೆ. ಮಂಗಳವಾರ ರಾತ್ರಿ 8 ಗಂಟೆಯ ಸಮಯದಲ್ಲಿ 1200 ರೂ. ಹಣ ಕೊಡುವ ವಿಚಾರವಾಗಿ ಪರಿಚಿತ ಯುವಕರ ನಡುವೆ ಜಗಳ ನಡೆದು ಮೆಹಬೂಬ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆಹಬೂಬ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದಾರೆ.

ಮಾರಕಾಸ್ತ್ರಗಳಿಂದ ಹಲ್ಲೆ: ಲಲಿತ್‌ಕುಮಾರ್ ಹಾಗು ಮಣಿಕಂಠ ಎಂಬುವರ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಈ ವೇಳೆ ಲಲಿತ್ ಕುಮಾರ್ ಬಣದಲ್ಲಿ ಮೆಹಬೂಬ್ ಕಾಣಿಸಿಕೊಂಡಿರುತ್ತಾನೆ. ಜಗಳ ಅತಿರೇಕಕ್ಕೆ ಹೋಗಿ ಮಣಿಕಂಠ, ಪವನ್, ಕಿರಣ್, ಕಾರ್ತಿಕ್ ಹಾಗೂ ಇತರರು ಮೆಹಬೂಬ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಮೆಹಬೂಬ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗೆ ಪೊಲೀಸರ ಬಲೆ: ಚಿಕಿತ್ಸೆ ಫಲಕಾರಿಯಾಗದೆ ಮೆಹಬೂಬ್ ಮೃತಪಟ್ಟಿರುವ ಹಿನ್ನೆಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ:ಐಟಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ನೆರವು ನೀಡಲಾಗುವುದು: ಇ. ವಿ ರಮಣ ರೆಡ್ಡಿ ಅಭಯ

ABOUT THE AUTHOR

...view details