ಕರ್ನಾಟಕ

karnataka

ETV Bharat / state

ಹಾಡಹಗಲೇ ನಡುರಸ್ತೆಯಲ್ಲಿ ಹರಿದ ನೆತ್ತರು : ಮಾರಕಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ ಮಾಡಿದ ದುಷ್ಕರ್ಮಿಗಳು - ಆವಲಹಳ್ಳಿಯಲ್ಲಿ ಕೊಚ್ಚಿ ವ್ಯಕ್ತಿಯ ಕೊಲೆ

ಇಂದು ಬೆಳಗ್ಗೆ 10:30ರ ವೇಳೆ ಈ ಘಟನೆ ನಡೆದಿದೆ. ಆಟೋದಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ 302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಯಾವ ವಿಷಯಕ್ಕೆ ನಡೆದಿದೆ ಎಂದು ತನಿಖೆ ಮಾಡಲಾಗುತ್ತಿದೆ. ಆರೋಪಿಗಳನ್ನು ಬಂಧಿಸಲು 3 ವಿಶೇಷ ತಂಡ ರಚಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ..

died person
ಕೊಲೆಯಾದ ವ್ಯಕ್ತಿ

By

Published : Sep 25, 2021, 9:09 PM IST

ಕೆಆರ್‌ಪುರ :ಕೆಆರ್‌ಪುರ ಸಮೀಪದ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವಮಾರಗೊಂಡನಹಳ್ಳಿಯಲ್ಲಿ ದುಷ್ಕರ್ಮಿಗಳ ಗ್ಯಾಂಗ್​​​ವೊಂದು ಲಾಂಗು-ಮಚ್ಚುನಿಂದ ಹಾಡಹಗಲೇ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿ ಕೊಲೆ ಮಾಡಿದ ದುಷ್ಕರ್ಮಿಗಳು..

ರಾಮಮೂರ್ತಿನಗರದ ಬೋವಿ ಕಾಲೋನಿ ನಿವಾಸಿ ವೆಂಕಟೇಶ್ (50) ಎಂಬುವರು ಕೊಲೆಯಾದ ದುರ್ದೈವಿ. ಇವರು ಬೆಳಗ್ಗೆ 10.30ರ ಸುಮಾರಿಗೆ ಮನೆಯಿಂದ ಆನಂದಪುರ ಮಾರ್ಗವಾಗಿ ಮಾರಗೊಂಡನಹಳ್ಳಿಗೆ ಬೈಕ್​​​​ನಲ್ಲಿ ಬಂದಿದ್ದರು. ಈ ವೇಳೆ ಹಿಂದಿನಿಂದ ಬಂದ ಆಟೋವೊಂದು ಬೈಕ್​​ಗೆ ಡಿಕ್ಕಿ ಹೊಡೆದಿದೆ.

ಆಟೋ ಡಿಕ್ಕಿ ಹೊಡೆದ ರಭಸಕ್ಕೆ ವೆಂಕಟೇಶ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ನೋಡ ನೋಡುತ್ತಿದ್ದಂತೆ ಐದಾರು ಜನ ದುಷ್ಕರ್ಮಿಗಳ ಗ್ಯಾಂಗ್, ವೆಂಕಟೇಶ್ ಮೇಲೆ ಲಾಂಗು-ಮಚ್ಚುಗಳಿಂದ ತಲೆ ಮತ್ತು ಕೈಗಳ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೆಆರ್​​ ಪುರ ಮತ್ತು ಆವಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ವೆಂಕಟೇಶ್ ರಾಮಮೂರ್ತಿನಗರದಲ್ಲಿ ನೆಲೆಸಿದ್ದಾರೆ. ಮಾರಗೊಂಡನಹಳ್ಳಿ ಬಳಿ ಕೊಲೆಯಾದ ವ್ಯಕ್ತಿಯ ಜಮೀನಿದೆ. ಅದನ್ನು ನೋಡಲು ಬೈಕ್​​​ನಲ್ಲಿ ಹೋಗುತ್ತಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಆ್ಯಕ್ಸಿಡೆಂಟ್ ರೀತಿಯಲ್ಲಿ ಬೈಕ್​ಗೆ ಡಿಕ್ಕಿ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಬಳಿಕ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಮಾತನಾಡಿ, ಇಂದು ಬೆಳಗ್ಗೆ 10:30ರ ವೇಳೆ ಈ ಘಟನೆ ನಡೆದಿದೆ. ಆಟೋದಲ್ಲಿ ಬಂದ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ. ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ 302 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಯಾವ ವಿಷಯಕ್ಕೆ ನಡೆದಿದೆ ಎಂದು ತನಿಖೆ ಮಾಡಲಾಗುತ್ತಿದೆ. ಆರೋಪಿಗಳನ್ನು ಬಂಧಿಸಲು 3 ವಿಶೇಷ ತಂಡ ರಚಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಪ್ರಾಥಮಿಕ ತನಿಖೆ ವೇಳೆ ಜಮೀನು ವಿವಾದ ಇಲ್ಲವೇ ಖಾಸಗಿ ವಿಚಾರಕ್ಕೆ ಕೊಲೆ ನಡೆದಿರಬಹುದು. ಮೃತನ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಹಾಗೂ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿ ಆರೋಪಿಗಳನ್ನು ಆದಷ್ಟು ಬೇಗ ಪತ್ತೆ ಹಚ್ಚಲಾಗುವುದು ಎಂದರು.

ಇದನ್ನೂ ಓದಿ: ರಾಜ್ಯದಲ್ಲಿಂದು 787 ಮಂದಿಗೆ ಕೋವಿಡ್.. ಗಣೇಶ್ ಹಬ್ಬದ ಬಳಿಕ ಕೇಸ್ ಏರಿಕೆಯ ಆತಂಕ..

ABOUT THE AUTHOR

...view details