ಬೆಂಗಳೂರು: ಚಲಿಸುತ್ತಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್‌ನ ಚಕ್ರ ಸ್ಫೋಟಗೊಂಡು ಪ್ರಯಾಣಿಕನೋರ್ವನ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿರುವ ಘಟನೆ ಇಂದು ಮಧ್ಯಾಹ್ನ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯಿತು.
ಬಿಎಂಟಿಸಿ ಬಸ್ ಟಯರ್ ಸ್ಫೋಟ: ಕಾಲು ಮುರಿದುಕೊಂಡ ಪ್ರಯಾಣಿಕ - ಈಟಿವಿ ಭಾರತ ಕನ್ನಡ
ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರ ಸ್ಫೋಟಗೊಂಡು ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡರು.
ಬಿಎಂಟಿಸಿ ಬಸ್ ಟೈಯರ್ ಬ್ಲಾಸ್ಟ್
ದುರ್ಗಪ್ಪ ಗಾಯಾಳು ಪ್ರಯಾಣಿಕ. ಬಾಗಲಕೋಟೆ ಮೂಲದ ದುರ್ಗಪ್ಪ ಡ್ರೈವಿಂಗ್ ಕೆಲಸ ಮಾಡುತ್ತಿದ್ದು ಮಧ್ಯಾಹ್ನ ಮಹಾಲಕ್ಷ್ಮೀ ಲೇಔಟ್‌ನಿಂದ ಯಲಹಂಕಗೆ ಕೆಲಸದ ನಿಮಿತ್ತ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ವಿದ್ಯಾರಣಪುರ ಬಳಿ ಬಸ್‌ನ ಹಿಂಬದಿ ಚಕ್ರ ಸ್ಫೋಟಗೊಂಡಿದೆ. ಬಸ್‌ನ ಒಳಭಾಗದ ತಗಡು ಕಿತ್ತು ಬಂದು ದುರ್ಗಪ್ಪ ಕಾಲಿಗೆ ಬಲವಾಗಿ ಬಡಿದು ಕಾಲು ಮುರಿದಿದೆ. ಕೂಡಲೇ ಸಹಪ್ರಯಾಣಿಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಾಲಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಏರ್ಪೋರ್ಟ್ ರಸ್ತೆಯಲ್ಲಿ ಕಾರು ಅಪಘಾತ: ತಪ್ಪಿದ ಭಾರಿ ಅನಾಹುತ..