ಕರ್ನಾಟಕ

karnataka

ETV Bharat / state

ಬೆಂಗಳೂರು: ಕಲ್ಲಿನಿಂದ ಜಜ್ಜಿ ವ್ಯಕ್ತಿ ಕೊಲೆ, ಪರಿಚಯಸ್ಥರಿಂದಲೇ ಕೃತ್ಯ ಶಂಕೆ - ಸಿಸಿಟಿವಿ ಕ್ಯಾಮೆರಾ

ಬೆಂಗಳೂರಿನ ಕೆಪಿ ಅಗ್ರಹಾರ ಬಳಿ ಮೂವರು ಪುರುಷರು, ಮೂವರು ಮಹಿಳೆಯರು ಸೇರಿಕೊಂಡು ವ್ಯಕ್ತಿಯ ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

Inspection by police
ಪೊಲೀಸರಿಂದ ಪರಿಶೀಲನೆ

By

Published : Dec 4, 2022, 1:11 PM IST

Updated : Dec 4, 2022, 1:44 PM IST

ಬೆಂಗಳೂರು: ಅಂದಾಜು 30 ವರ್ಷದ ವ್ಯಕ್ತಿಯನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಘಟನೆ ಕೆ ಪಿ ಅಗ್ರಹಾರ ಸಮೀಪ ನಡೆದಿದೆ. ಮೃತ ವ್ಯಕ್ತಿಯ ಗುರುತು, ವಿಳಾಸ ಪತ್ತೆಯಾಗಿಲ್ಲ.

ಕೆಪಿ ಅಗ್ರಹಾರದ ಹೇಮಂತ್ ಮೆಡಿಕಲ್ ಶಾಪ್‌ ಬಳಿ ಕಳೆದ ರಾತ್ರಿ ಸುಮಾರು 12.30 ಕ್ಕೆ ಕೊಲೆ ನಡೆದಿದೆ. ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು, ಪರಿಚಯಸ್ಥರಿಂದ ಹತ್ಯೆ ನಡೆದಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಸಿಕ್ಕಿದೆ.

ಲಕ್ಷ್ಮಣ್ ನಿಂಬರಗಿ ಡಿಸಿಪಿ

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದರು. ಘಟನಾ ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಆಗಮಿಸಿ, ತನಿಖೆ ನಡೆಸಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಹಾಡಹಗಲೇ ಮನೆ ಕಳ್ಳತನ ಮಾಡುತ್ತಿದ್ದ ದಂಪತಿ ಬಂಧನ

Last Updated : Dec 4, 2022, 1:44 PM IST

ABOUT THE AUTHOR

...view details