ಕರ್ನಾಟಕ

karnataka

ETV Bharat / state

ಶೀಲ ಶಂಕಿಸಿ ಪತ್ನಿಯ ಕೊಲೆ ಮಾಡಿ ನೆರೆ ರಾಜ್ಯಕ್ಕೆ ತೆರಳಿದ್ದ ಗಂಡ ಬೀದಿ ಹೆಣವಾದ..

ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರಿಗೆ ಶಾಕ್ ಆಗಿತ್ತು. ಯಾಕಂದ್ರೆ, ಪೊಲೀಸರು ನಿಸಾರ್ ಹುಡುಕಿಕೊಂಡು ಹೋದಾಗ ಆತನ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ನಿಸಾರ್ ಸಾವನ್ನಪ್ಪಿ ಎರಡು ದಿನವಾಗಿರುವುದು ಗೊತ್ತಾಗಿದೆ..

ಹೆಂಡತಿಯನ್ನು ಕೊಲೆ ಮಾಡಿದ್ದ ಗಾಯಾಳು ಪತಿಯೂ ಸಾವು
ಹೆಂಡತಿಯನ್ನು ಕೊಲೆ ಮಾಡಿದ್ದ ಗಾಯಾಳು ಪತಿಯೂ ಸಾವು

By

Published : Nov 28, 2021, 3:44 PM IST

ಬೆಂಗಳೂರು :ಅವರಿಬ್ಬರೂ ಕೂಡಿ ಬಾಳುವುದಕ್ಕೆ ಪ್ರಾರಂಭಿಸಿ 20 ವರ್ಷಗಳೇ ಕಳೆದಿತ್ತು. ಆದರೂ ಪತಿ ಪತ್ನಿಯ ಜೀವನದಲ್ಲಿ ಅನುಮಾನದ ಕಾರ್ಮೋಡ ಆಗಾಗೇ ಬಿರುಗಾಳಿ ಎಬ್ಬಿಸುತ್ತಿತ್ತು. ಪತಿ ಗೇಮ್ ಪ್ಲಾನ್ ಸಕ್ಸಸ್ ಆದರೂ ಜೀವನವೇ ಖತಂ ಆದ ಸ್ಟೋರಿ ಇದು.

ನಿಸಾರ್ ಹಾಗೂ ಆಯೇಶಾ ಆಡುಗೋಡಿಯ ರಾಜೇಂದ್ರ ನಗರದಲ್ಲಿ ವಾಸವಾಗಿದ್ದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು 20ಕ್ಕೂ ಹೆಚ್ಚು ವರ್ಷಗಳೇ ಕಳೆದಿವೆ. ಆದರೂ ಪತ್ನಿಯ ಶೀಲದ ಮೇಲೆ ಪತಿ ಸದಾ ಅನುಮಾನ ವ್ಯಕ್ತಪಡಿಸಿದ್ದ. ಇದರಿಂದ ನಿತ್ಯ ದಂಪತಿಯ ನಡುವೆ ಕಲಹ ಆಗುತಿತ್ತು.

‌ಪತ್ನಿಗೆ ಒಂದು ಗತಿ ಕಾಣಿಸಲು ನಿರ್ಧರಿಸಿದ್ದ ನಿಸಾರ್, ಆಕೆಯ ಸಾವು ಸಹಜ‌ ಎಂದು ಬಿಂಬಿಸುವಂತೆ ಕೊಲೆ ಮಾಡಲು ನಿರ್ಧರಿಸಿದ್ದ. ತನ್ನ ಪ್ಲಾನ್ ನಂತೆಯೇ ಪೆಟ್ರೋಲ್ ಸುರಿದು ಸಿಲಿಂಡರ್ ಆನ್ ಮಾಡಿ ಬ್ಲಾಸ್ಟ್‌ನಂತೆ ಬಿಂಬಿಸಿ ಪತ್ನಿ ಆಯೇಶಾಳನ್ನು ಕೊಂದಿದ್ದ. ಆಡುಗೋಡಿಯ ರಾಜೇಂದ್ರನಗರದಲ್ಲಿ ಈ ಘಟನೆ ನಡೆದಿತ್ತು. ಈ ಬಗ್ಗೆ ಪೊಲೀಸರಿಗೆ ಪತಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು.

ಪತ್ನಿ ಕೊಂದು ನೆರೆ ರಾಜ್ಯಕ್ಕೆ ಎಸ್ಕೇಪ್​​ ಆಗಿದ್ದ ಗಂಡ :ನವೆಂಬರ್ 19ರಂದು ಪತ್ನಿಯನ್ನು ಕೊಂದಿದ್ದ ನಿಸಾರ್ ನೆರೆ ರಾಜ್ಯಕ್ಕೆ ಎಸ್ಕೇಪ್ ಆಗಿದ್ದ. ನಿಸಾರ್‌ಗಾಗಿ ಆಡುಗೋಡಿ ಪೊಲೀಸರು ತೀವ್ರ ಶೋಧ ಕಾರ್ಯ ಮಾಡಿದ್ದರು. ಆದರೆ, ಆಗಾಗ ಫೋನ್ ಆನ್ ಮಾಡಿ ಸ್ವಿಚ್ ಆಫ್ ಮಾಡುತ್ತಿದ್ದ. ಇದರಿಂದ ಲೋಕೇಷನ್ ಟ್ರೇಸ್ ಮಾಡೋದು ಕಷ್ಟವಾಗಿತ್ತು.

ಪತ್ನಿಯ ಕೊಲೆ ವೇಳೆ ಗಾಯಾಳುವಾಗಿದ್ದ ನಿಸಾರ್ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದಿರಲಿಲ್ಲ. ಗಾಯದ ನೋವು ವಿಪರೀತವಾದಾಗ ಮಗನಿಗೆ ಫೋನ್ ಮಾಡಿದ್ದ ನಿಸಾರ್. ಫೋನ್ ನೆರೆ ರಾಜ್ಯದಲ್ಲಿ ಇರುವುದು ಲೋಕೇಷನ್ ಟ್ರೇಸ್ ವೇಳೆ ಪತ್ತೆಯಾಗಿತ್ತು.

ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರಿಗೆ ಶಾಕ್ :ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರಿಗೆ ಶಾಕ್ ಆಗಿತ್ತು. ಯಾಕಂದ್ರೆ, ಪೊಲೀಸರು ನಿಸಾರ್ ಹುಡುಕಿಕೊಂಡು ಹೋದಾಗ ಆತನ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ನಿಸಾರ್ ಸಾವನ್ನಪ್ಪಿ ಎರಡು ದಿನವಾಗಿರುವುದು ಗೊತ್ತಾಗಿದೆ.

ಸದ್ಯ ಆಡುಗೋಡಿ ಪೊಲೀಸರು ಆರೋಪಿಯ ಬಂಧನಕ್ಕಾಗಿ ಹಾಕಿದ್ದ ಶ್ರಮ ವ್ಯರ್ಥವಾಗಿದೆ. ಪತ್ನಿಯ ಮೇಲೆ ಅನುಮಾನಗೊಂಡ ಪತಿ ಆಕೆಯನ್ನು ಕೊಂದು ತಾನೂ ಜೀವ ಉಳಿಸಿಕೊಳ್ಳಲಾರದೇ ದುರಂತ ಅಂತ್ಯವಾಗಿರೋದು ವಿಚಿತ್ರವೇ ಸರಿ.

ABOUT THE AUTHOR

...view details