ಬೆಂಗಳೂರು: ದ್ವಿಚಕ್ರ ವಾಹನ ಸವಾರನ ನಿರ್ಲಕ್ಷ್ಯಕ್ಕೆ ವೃದ್ಧನೋರ್ವ ಬಲಿಯಾಗಿದ್ದಾನೆ. ಬೆಂಗಳೂರಿನ ಶಾಂತಿನಗರದ ಬಳಿ ಕೆಲದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರು: ದ್ವಿಚಕ್ರ ವಾಹನ ಸವಾರನ ನಿರ್ಲಕ್ಷ್ಯಕ್ಕೆ ವೃದ್ಧ ಬಲಿ - bangalore latest news
ರಸ್ತೆ ದಾಟುತಿದ್ದಾಗ ಬೈಕ್ಸವಾರನೋರ್ವ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವ್ಯಕ್ತಿ ಸಾವಿಗೀಡಾಗಿದ್ದಾನೆ
ದ್ವಿಚಕ್ರ ವಾಹನ ಸವಾರನ ನಿರ್ಲಕ್ಷ್ಯಕ್ಕೆ ವೃದ್ಧ ಬಲಿ
ಸುಬ್ರಮಣಿ ಸಿ ಮೃತ ವ್ಯಕ್ತಿ.ಅಪಘಾತದಲ್ಲಿ ವೃದ್ಧನ ತಲೆ ಹಾಗೂ ಕೈ ಕಾಲುಗಳಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದ್ವಿಚಕ್ರ ವಾಹನ ಸವಾರ ಶಾಂತಿನಗರ ಬಸ್ ನಿಲ್ದಾಣದ ಕಡೆಯಿಂದ ರಿಚ್ಮಂಡ್ ವೃತ್ತದ ಕಡೆಗೆ ನಿರ್ಲಕ್ಷತೆಯಿಂದ ವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದ. ಅ ಸಮಯದಲ್ಲಿ ಅದೇ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಕೇಂದ್ರ ಕಚೇರಿ ಕಡೆಯಿಂದ ಭಾರತ್ ಬ್ಯಾಂಕ್ ಕಡೆಗೆ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ವೃದ್ಧ ಸಾವಿಗೀಡಾಗಿದ್ದಾನೆ.